ಕಾಸರಗೋಡು: ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೇತೃತ್ವದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಪಾಡಿ ಪಾಡಶೇಖರ ಪ್ರದೇಶಕ್ಕೆ(ಕೃಷಿ ಸಮಿತಿ) ಭೇಟಿ ನೀಡಿದರು. ಪಾಡಶೇಖರ ಬಳಿಯ ವಿಸಿಬಿ ಕೆಡವಲು ಮತ್ತು ಹೊಸ ವಿಸಿಬಿ ಕಮ್ ಸೇತುವೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಸಣ್ಣ ನೀರಾವರಿ ಇಇಗೆ ಸೂಚನೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೈಲಾರ್ ಮಿನಿ ಚೆಕ್ ಡ್ಯಾಂ ಅನ್ನು ಪುನಶ್ಚೇತನಗೊಳಿಸಲು ಸಹ ನಿರ್ಧರಿಸಲಾಯಿತು.
ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಟಿ.ಸಂಜೀವ್, ಸಹಾಯಕ ಅಭಿಯಂತರ ನವ್ಯ, ಪ್ರಧಾನ ಕೃಷಿ ಅಧಿಕಾರಿ ಮಿನಿ, ಉಪನಿರ್ದೇಶಕ ವಿಷ್ಣು ನಾಯರ್, ಅಂತರ್ಜಲ ಇಲಾಖೆ ಜಿಲ್ಲಾ ಅಧಿಕಾರಿ ಒ.ರತೀಶ್, ಪಾಡಶೇಖರ ಸಮಿತಿ ಕಾರ್ಯದರ್ಶಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.