ಕಾಸರಗೋಡು: ಚಟ್ಟಂಚಾಲ್‍ನ ಟಾಟಾ ಕೋವಿಡ್ ಆಸ್ಪತ್ರೆಯನ್ನು ತೀವ್ರ ನಿಗಾ ಘಟಕವನ್ನಾಗಿ ಪರಿವರ್ತಿಸುವ ಅಂಗವಾಗಿ ಪ್ರಸ್ತುತ ಆಸ್ಪತ್ರೆ ಕಟ್ಟಡ ವಠಾರದ ಕಂಟೈನರ್‍ಗಳನ್ನು ಬದಲಾಯಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕ ಸಿ.ಎಚ್.ಕುಞಂಬು ಸಭೆಯಲ್ಲಿ ಆಗ್ರಹಿಸಿದರು. ಇದೇ ಸಂದರ್ಭ ಕಂಟೈನರ್ ಬದಲಾವಣೆಗೆ ಟೆಂಡರ್ ಆಹ್ವಾನಿಸುವಂತೆ ಜಿಲ್ಲಾ ವ್ಯದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಈ ಸಂದರ್ಭ ಬೇಡಡ್ಕ ಆಡು ಸಾಕಣಿಕಾ ಕೇಂದ್ರವನ್ನು ಕೆಡಿಪಿಗೆ ವಹಿಸಿಕೊಡಲು ತೀರ್ಮಾನಿಸಲಯಿತು. ಕಾಸರಗೋಡು ತಾಲೂಕಿನ ಮುನ್ನಾಡ್ ಗ್ರಾಮದಲ್ಲಿ ಜಮೀನಿನ ನ್ಯಾಯಬೆಲೆಯಲ್ಲಿ ವಿಪರೀತ ಹೆಚ್ಚಳದಿಂದ ನೋಂದಣಿಯಾಗದಿರುವುದರಿಂದ ಸಮಸ್ಯೆ ಎದುರಾಗಿದೆ. ಇದನ್ನು ಹರಿಸಲು ಎರಡು ತಿಂಗಳೊಳಗೆ ಸ್ಥಳದಲ್ಲೇ ಅದಾಲತ್ ಆಯೋಜಿಸಲಾಗುವುದು. ಗ್ರಾಮಾಧಿಕಾರಿಗಳು ಆ ಪ್ರದೇಶದ ವ್ಯಕ್ತಿಗಳಿಂದ ದೂರುಗಳನ್ನು ಸ್ವೀಕರಿಸಲಿದ್ದು, ನಂತರ ಭೂಮಿಯ ನ್ಯಾಯಯುತ ಮೌಲ್ಯವನ್ನು ನಿರ್ಧರಿಸಲು ತೀರ್ಮಾಣಿಸಲಾಯಿತು.