ಕೊಲ್ಲಂ: ಮುಂದಿನ ವರ್ಷದಿಂದ ಹೊಸ ಕೈಪಿಡಿಯೊಂದಿಗೆ ರಾಜ್ಯ ಶಾಲಾ ಕಲೋತ್ಸವ ನಡೆಯಲಿದೆ ಎಂದು ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಹೇಳಿದ್ದಾರೆ.
ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಇದಕ್ಕಾಗಿ ಕರಡು ಸಿದ್ಧಪಡಿಸಲಾಗುವುದು. ವೇದಿಕೆಯಲ್ಲಿ ತೀರ್ಪುಗಾರರ ಅರ್ಹತೆಯನ್ನೂ ಪ್ರಕಟಿಸಲಾಗುವುದು. ಬಹುಮಾನದ ಬಗ್ಗೆ ಅಲ್ಲ, ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಬೆಂಬಲ ನೀಡಲಾಗುವುದೆಂದು ಸಚಿವರು ಹೇಳಿದರು.
62ನೇ ಶಾಲಾ ಕಲೋತ್ಸವದಲ್ಲಿ ಕಣ್ಣೂರು ಪ್ರಾಬಲ್ಯ ಮುಂದುವರಿಸಿದೆ. ಮೂರನೇ ದಿನದ ನಂತರ ಕಣ್ಣೂರು ಜಿಲ್ಲೆ 674 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ 648 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿವೆ. ತ್ರಿಶೂರ್ 631 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆತಿಥೇಯ ಕೊಲ್ಲಂ 623 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.