ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಎಸ್‍ಇಟಿಒ ಸಂಘಟನೆ ವತಿಯಿಂದ ನಡೆಯಲಿರುವ ಮುಷ್ಕರದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗೆ ನೋಟೀಸು ನೀಡುವ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರನ್ನು ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಭೇಟಿಯಾಗಿ ಮುಷ್ಕರ ನೋಟಿಸ್ ಹಸ್ತಾಂತರಿಸಲಾಯಿತು.
ಎಸ್‍ಇಟಿಓ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಎಂ. ಜಯಪ್ರಕಾಶ್ ನೇತೃತ್ವದ ನಿಯೋಗ ನೋಟೀಸು ನೀಡಿದೆ. ಸಂಘಟನೆ ಸಂಚಾಲಕ ಕೆ.ಶ್ರೀನಿವಾಸನ್, ಮುಖಂಡರಾದ ಎಂ.ಶ್ರೀನಿವಾಸನ್, ವತ್ಸಲಕೃಷ್ಣನ್, ಎಂ.ಟಿ. ಪ್ರಸೀದಾ, ವಿ.ಟಿ.ಪಿ.ರಾಜೇಶ್, ವಿ.ಎಂ.ರಾಜೇಶ್, ಎಸ್.ಎಂ.ರಜನಿ, ಗಿರೀಶ್ ಆನಪೆಟ್ಟಿ, ರತೀಶ್ ಬಂತಡ್ಕ, ಜಯರಾಜ್ ಪೆರಿಯ, ಪ್ರತೀಶ್ ಬಾಬು, ವಿ.ಕೆ.ಬಾಲಕೃಷ್ಣನ್, ಸಫೀನಾ ಜತೆಗಿದ್ದರು.