ಉಪ್ಪಳ: ಇತ್ತೀಚೆಗೆ ಅನಾರೋಗ್ಯ ಕಾರಣ ಅಕಾಲಿಕವಾಗಿ ಮೃತರಾದ ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ಗುರುಪ್ರಸಾದ್ ಕಯ್ಯಾರು ಅವರ ನಿಧನದಿಂದ ಅವರ ಮನೆಯವರು, ಕುಟುಂಬಸ್ಥರು, ಕಾರ್ಯಕರ್ತರು, ಒಡನಾಡಿಗಳು ಅಕ್ಷರಶಃ ವೇದನೆಗೊಳಗಾಗಿದ್ದಾರೆ.
ಪರಂಬಳ ಕಯ್ಯಾರು ಪ್ರದೇಶದಲ್ಲಿ ಸಂಘಪರಿವಾರದ ಚಟುವಟಿಕೆಗಳಲ್ಲಿ ನಿರಂತರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಗುರುಪ್ರಸಾದ್ ಅವರು, ಪರಂಬಳ ಕಯ್ಯಾರು ದುರ್ಗಾ ಶಕ್ತಿ ಕುಣಿತ ಭಜನಾ ತಂಡದ ಸಂಚಾಲಕರಾಗಿದ್ದರು. ಬಿಜೆಪಿ ಪರಂಬಳ ವಾರ್ಡ್ (ಬೂತ್ )ನ ಅಧ್ಯಕ್ಷರಾಗಿದ್ದರು.
ಕಯ್ಯಾರು ನಿವಾಸಿಯಾದ ನಿವೃತ್ತ ಪೋಸ್ಟ್ ಮಾಸ್ಟರ್ ನಾರಾಯಣ ನಾಯ್ಕ ಮತ್ತು ಜಯಂತಿ ದಂಪತಿಯವರ ಪ್ರಥಮ ಪುತ್ರನಾದ ಗುರುಪ್ರಸಾದ್ (44 ವರ್ಷದ) ಅವರು ಅಲ್ಪಕಾಲದ ಅಸೌಖ್ಯಕ್ಕೆ ತುತ್ತಾಗಿ 2024ನೇ ಜನವರಿ 7ರಂದು ಭಾನುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ಗುರುಪ್ರಸಾದ್ ಅವರನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿ ಮನೆಯ ಆಧಾರವೊಂದು ಕಳಚಿ ಹೋಗಿದೆ.
ಇದೀಗ ಅವರ ಪತ್ನಿ ಸುಜಾತ ಮತ್ತು ಏಕಪುತ್ರ ವೀಕ್ಷತ್ ಹಾಗೂ ಮನೆಯವರು ಮಾನಸಿಕವಾಗಿ ಜರ್ಜರಿತವಾಗಿರುವುದು ಮಾತ್ರವಲ್ಲದೆ ಆರ್ಥಿಕವಾಗಿಯೂ ಸಂಕಷ್ಟ ಅನುಭವಿಸುವಂತಾಗಿದೆ. ಅವರ ಕನಸಿನ ಮನೆಯೊಂದನ್ನು ನಿರ್ಮಿಸಲು ಹೊರಟಿರುವುದು ಕೂಡಾ ಅರ್ಧಕ್ಕೇ ಮೊಟಕುಗೊಳ್ಳುವಂತಾಗಿದೆ.
ಆದ್ದರಿಂದ ಸಹೃದಯಿ ಸಮಾಜ ಬಾಂಧವರು ಅವರ ಮನೆಯವರಿಗೆ ಆರ್ಥಿಕವಾಗಿ ಸಹಾಯ ಸಹಕಾರವನ್ನಿತ್ತು ಅವರು ಪಡುತ್ತಿರುವ ನೋವು ದುಃಖದಲ್ಲಿ ಭಾಗಿಗಳಾಗಬೇಕಾಗಿದೆ. ಈ ಮೂಲಕ ಅವರ ಮನೆಯವರಿಗೆ ಸಾಂತ್ವನ ನುಡಿದು ಅವರು ಮಾನಸಿಕವಾಗಿ ಇನ್ನಷ್ಟು ಕುಗ್ಗದಂತೆ ಸಹಕರಿಸಬೇಕಾಗಿದೆ.
ಇದೀಗ ಮಾನಸಿಕ ವಾಗಿಯೂ ಆರ್ಥಿಕವಾಗಿಯು ಕುಗ್ಗಿರುವ ಸಹೋದರಿ ಸುಜಾತಾ 12 ವರ್ಷ ಪ್ರಾಯದ ಮಗ ವೀಕ್ಷಿತ್ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವವರು
ಸುಜಾತ ಗುರುಪ್ರಸಾದ್ ಅವರ ಗೂಗಲ್ ಪೇ ನಂಬರ್ ಮೂಲಕ ಕಳುಹಿಸಬಹುದೆಂದು ವಿನಂತಿ ಮಾಡಲಾಗಿದೆ.
ಸುಜಾತ ಸಿ.ಕೆ
ಎ.ಸಿ.ನಂಬ್ರ: 0286053000007864
ಐಎಫ್ ಎಸ್ ಸಿ: ಎಸ್ ಐ ಬಿ ಎಲ್.0000286
ಸೌತ್ ಇಂಡಿಯಾ ಬ್ಯಾಂಕ್ ಪಚ್ಚಂಬಳ ಶಾಖೆ