ಮಂಜೇಶ್ವರ : ಮಂಜೇಶ್ವರ ಕರಾವಳಿಯಲ್ಲಿ ಅನಧಿಕೃತವಾಗಿ ಮೀನುಗಾರಿಕೆ ನಡೆಸಿರುವ ಇತರ ರಾಜ್ಯದ ದೋಣಿಯನ್ನು ಮೀನುಗಾರಿಕಾ ಇಲಾಖೆ, ಕುಂಬಳೆ, ಬೇಕಲ, ತ್ರಿಕರಿಪುರ ಕರಾವಳಿ ಪೆÇಲೀಸರು ಮಂಜೇಶ್ವರಂ ಕರಾವಳಿ ಠಾಣೆ ಪೊಲೀಸರು ಜಂಟಿ ಗಸ್ತು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕರಾವಳಿಯಿಂದ 12 ನಾಟಿಕಲ್ ಮೈಲುಗಳ ವರೆಗೆ ಯಾಂತ್ರೀಕೃತ ದೋಣಿಗಳಿಗೆ ಟ್ರಾಲಿಂಗ್ ನಡೆಸಲು ಕೇರಳ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಡಿ ಅನುಮತಿ ಇಲ್ಲ. ಯಾಂತ್ರೀಕೃತ ದೋಣಿಗಳ ಅಕ್ರಮ ಮೀನುಗಾರಿಕೆಯಿಂದ ಸಾಂಪ್ರದಾಯಿಕ ಮೀನುಗಾರರಿಗೆ ಅಪಾರ ನಷ್ಟ ಅನುಭವಿಸಬೇಕಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಅಕ್ರಮ ಮೀನುಗಾರಿಕೆ ವಿರುದ್ಧ ಇಲಾಖೆ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಿದ್ದು, ಕಳೆದ ಆರು ತಿಂಗಳಲ್ಲಿ ಜಿಲ್ಲಾಡಳಿತ ಐವತ್ತು ಲಕ್ಷ ರೂಪಾಯಿ ದಂಡ ವಸೂಲಿಮಾಡಿರುವುದಾಗಿ ಮೀನುಗಾರಿಕೆ ಉಪನಿರ್ದೇಶಕ ಕೆ.ಎ.ಲಬೀಬ್ ಮಾಹಿತಿ ನೀಡಿದ್ದಾರೆ. ಅನಧಿಕೃತ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಶಾಲೋಮ್ ಮಾನಿರ್ಂಗ್ ಸ್ಟಾರ್ ಎಂಬ ದೊಣಿಯನ್ನು ವಶಕ್ಕೆ ಪಡೆಯಲಾಗಿದೆ. ಅನಧಿಕೃತ ಮೀನುಗಾರಿಕೆ ವಿರುದ್ಧ ಮೀನುಗಾರಿಕೆ ಇಲಾಖೆ ಕಳೆದ ಆರು ತಿಂಗಳಲ್ಲಿ ನಡೆಸಿರುವ ಕಾರ್ಯಾಚರಣೆಯಲ್ಲಿ ಅರ್ಧ ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆ.