ಮುಂಬೈ: 'ಸೊಲ್ಲಾಪುರದಲ್ಲಿ ನಡೆದ ಹಿಂದೂ ಜನ್ ಆಕ್ರೋಶ್ ರ್‍ಯಾಲಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ನಿತೇಶ್ ರಾಣೆ, ತೆಲಂಗಾಣ ಶಾಸಕ ಟಿ. ರಾಜಾ ಸಿಂಗ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ' ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

'ರಾಜೇಂದ್ರ ಚೌಕದಿಂದ ಕನ್ನಾ ಚೌಕದವರೆಗೆ ಶನಿವಾರ ರ್‍ಯಾಲಿ ನಡೆದ ಸಂದರ್ಭದಲ್ಲಿ ರಾಣೆ ಅವರು 'ಜಿಹಾದಿಗಳು' ಮತ್ತು ಮಸೀದಿಗಳ ಧ್ವಂಸದ ಬಗ್ಗೆ ಹಾಗೂ ಹೈದರಾಬಾದ್‌ನ ಗೋಶಾಮಮಹಲ್ ಶಾಸಕ ಟಿ. ರಾಜಾ ಸಿಂಗ್ ಅವರು 'ಲವ್ ಜಿಹಾದ್' ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ರ್‍ಯಾಲಿಯಲ್ಲಿ ಭಾಗವಹಿಸಿದ್ದ 'ಸಕಾಲ್ ಹಿಂದೂ ಸಮಾಜ'ದ ಪದಾಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ' ಎಂದಿದ್ದಾರೆ.