ಉಪ್ಪಳ : ಇಕೋ ಕ್ಲಬ್ಬಿನ ನೇತೃತ್ವದಲ್ಲಿ ಒಂದು ದಿನದ ಜೈವ ವೈವಿದ್ಯ ತಿಳುವಳಿಕಾ ಶಿಬಿರವನ್ನು ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಹೈಸ್ಕೂಲ್ ಕುರುಡಪದವಿನಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.ಯುವ ಪಕ್ಷಿ ನಿರೀಕ್ಷಕರಾದ ಕಾರ್ಳೆ ಪ್ರಣವ್ ಭಂಡಾರಿ ಮತ್ತು ಪುತ್ತೂರು ಪೂರ್ಣಪ್ರಜ್ಞ ಇವರು ಶಾಲೆಯ ಸಮೀಪದಲ್ಲಿರುವ ಜೈವ ವೈವಿಧ್ಯ ತಾಣವಾದ ಕೊಮ್ಮಂಗಳ ಪ್ರದೇಶದ ಸುತ್ತಮುತ್ತಲಿನ ಜೈವವೈವಿಧ್ಯದ ವೈಜ್ಞಾನಿಕ ಪರಿಚಯ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು.ಎ.ಯು.ಪಿ.ಯಸ್.ಚಿಪ್ಪಾರು,ಎ.ಯು.ಪಿ.ಯಸ್.ಬಾಕ್ರಬೈಲ್,ಎ.ಯು.ಪಿ.ಯಸ್. ಕುರುಡಪದವಿನ ಎಕೋ ಕ್ಲಬ್ ನ ಸುಮಾರು ಎಂಬತ್ತರಷ್ಟು ಸ್ವಯಂ ಸೇವಕರು ಪಾಲ್ಗೊಂಡು ಹೆಚ್ಚಿನ ಅನುಭವಗಳನ್ನು ಪಡೆದುಕೊಂಡರು.
ಭಾಗವಹಿಸಿದ ಎಕೋ ಕ್ಲಬ್ ಸ್ವಯಂ ಸೇವಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದ ಶಾಲಾ ಪ್ರಬಂಧಕ ಗೋಪಾಲಕೃಷ್ಣ ಭಟ್ ಕುರಿಯ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಜೈವ ವೈವಿದ್ಯತೆಯ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಮುಖ್ಯೋಪಾಧ್ಯಾಯನಿ ಗಾಯತ್ರಿ ಕೆ ಮಾತನಾಡಿದರು. ಎಕೋ ಕ್ಲಬ್ ಸಂಚಾಲಕಿ ಸುಪ್ರಿಯ ಟೀಚರ್ ವಂದಿಸಿದರು.