ಉಪ್ಪಳ: ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್ ಮೂಡಿತ್ತಾಯ-ಶಕುಂತಲಾ ದಂಪತಿಯರನ್ನು ಬೆಂಗಳೂರಿನ ಶಂಪಾ ಪ್ರತಿಷ್ಠಾನದ ಆಶ್ರಯದಲ್ಲಿ ಅಭಿನಂದಿಸಲಾಯಿತು ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಪಿ.ಎನ್ ಮೂಡಿತ್ತಾಯ ದಂಪತಿಯನ್ನು ಶಾಲು ಹೊದಿಸಿ, ಸಮರಣಿಕೆ ನೀಡಿ ಗೌರವಿಸಿದರು.
ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ ಅಭಿನಂದನಾ ಭಾಷಣ ಮಾಡಿದರು. ಶಂಪಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಮಂಜುನಾಥ ಅಭಿನಂದನಾ ಪತ್ರ ವಾಚಿಸಿದರು. ಹಿರಿಯ ರಂಗನಟ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದರು.
ಪ್ರೊ.ಪಿ.ಎನ್ ಮೂಡಿತ್ತಾಯ ಅವರು ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಶಂಪಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಡಾ.ಪ್ರಮೀಳಾ ಮಾಧವ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ,ಉಪನ್ಯಾಸಕ ರಾಧಾಕೃಷ್ಣ ಬೆಳ್ಳೂರು ವಂದಿಸಿದರು.
ಈ ಸಂದರ್ಭ ಡಾ. ರಮಾನಂದ ಬನಾರಿ ಸಾರಥ್ಯದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಕಲಾಕುಂಚ ಬಾಯಿಕಟ್ಟೆ, ಶ್ರೀ ಅಯ್ಯಪ್ಪ ಸೇವಾಸಂಘ ಮೊದಲಾದ ಸಂಸ್ಥೆಗಳಿಂದ ಅಭಿನಂದನೆ ನಡೆಯಿತು.
ಅಭಿನಂದನೆಗೆ ಮೊದಲು ಪ್ರೊ.ಪಿ.ಎನ್ ಮೂಡಿತ್ತಾಯ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಡಾ.ಯು ಮಹೇಶ್ವರಿ, ಪ್ರೊ. ಎ.ಶ್ರೀನಾಥ್, ಡಾ.ಮಹಾಲಿಂಗೇಶ್ವರ ಭಟ್,ವಿಶಾಲಾಕ್ಷ ಪುತ್ರಕಳ, ಮಂಜುನಾಥ, ಡಾ.ಮೋಹನ ಕುಂಟಾರ್, ಬಾಲ ಮಧುರಕಾನನ, ಡಾ.ವೇದಾವತಿ, ಪ್ರೊ. ಲಕ್ಷೀ ಕೆ, ಪ್ರವೀಣ ಪದ್ಯಾಣ, ಡಾ.ಪ್ರಮೀಳಾ ಮಾಧವ್ ಉಪಸ್ಥಿತರಿದ್ದರು. ಸುಭಾಷ್ ಪಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು.