ಕುಂಬಳೆ: ಶ್ರೀ ಧೂಮಾವತಿ ಯಕ್ಷಗಾನ ಕಲಾಸಂಘ ಅಮೆತ್ತೋಡು ದಂಡೆಗೋಳಿ ಇವರು ಆಯೋಜಿಸಿದ ನಾಲ್ಕನೇ ತಂಡದ ಯಕ್ಷಗಾನ ನಾಟ್ಯ ತರಬೇತಿಯನ್ನು ಶ್ರೀ ರಾಮ ಭಜನಾ ಮಂದಿರ ಅಬಿಲಡ್ಕ ದಲ್ಲಿ ಆರಂಭಿಸಲಾಯಿತು. ಮಂದಿರದ ಅಧ್ಯಕ್ಷ ಬಾಬು ಯು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಾಟ್ಯ ಗುರುಗಳಾದ ಧರ್ಮೇಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶಂಕರ ಪಾಟಾಳಿ ಅಂಬಿಲಡ್ಕ ಮತ್ತು ವಸಂತ ಶ್ರಾವಣಕೆರೆ ಉಪಸ್ಥಿತರಿದ್ದರು. ಹರೀಶ್ ಅಂಬಿಲಡ್ಕ ಸ್ವಾಗತಿಸಿ, ರವಿಚಂದ್ರ ತಿರ್ತೊಡಿ ವಂದಿಸಿದರು. ರಮೇಶ್ ಶ್ರಾವಣಕೆರೆ ಕಾರ್ಯಕ್ರಮವನ್ನು ನಿರೂಪಿಸಿದರು.