HEALTH TIPS

ದೇಶದ ಬಹುತೇಕ ರಾಜ್ಯಗಳು ಎನ್‌ಇಪಿ ಜಾರಿಗೊಳಿಸುತ್ತಿವೆ: ಧರ್ಮೇಂದ್ರ ಪ್ರಧಾನ್

            ಹೈದರಾಬಾದ್‌ : ದೇಶದ ಬಹುತೇಕ ಎಲ್ಲ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಜಾರಿಗೆ ತರುತ್ತಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಶುಕ್ರವಾರ ತಿಳಿಸಿದರು.

             ಐಐಟಿ- ಹೈದರಾಬಾದ್‌ನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯೋಜನೆಗೊಂಡಿರುವ ಉತ್ಸವವನ್ನು ಉದ್ಘಾಟಿಸಿ‌ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಹಿಂಜರಿಕೆ ತೋರುತ್ತಿರುವ ಕೆಲ ರಾಜ್ಯಗಳು ಸಹ ವಿಭಿನ್ನ ಪರಿಭಾಷೆಯ ಮೂಲಕ ಈ ನೀತಿಯನ್ನು ಜಾರಿಗೆ ತರುತ್ತಿವೆ ಎಂದರು.

               'ವಿಭಿನ್ನ ಪರಿಭಾಷೆಯನ್ನು ಬಳಸುವುದರಲ್ಲಿ ಆ ರಾಜ್ಯಗಳು ತೃಪ್ತಿ ಕಾಣುತ್ತಿವೆ. ನಾನೂ ಸಂತುಷ್ಟನಾಗಿದ್ದೇನೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶದ ತಾತ್ವಿಕ ಮತ್ತು ಐತಿಹಾಸಿಕ ದಾಖಲೆಯಾಗಿದ್ದು, ಬಹುತೇಕ ರಾಜ್ಯಗಳು ಇದನ್ನು ಜಾರಿಗೊಳಿಸುತ್ತಿವೆ ಎಂಬುದನ್ನು ನಾನು ಹೇಳಬಲ್ಲೆ' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries