ಕಾಸರಗೋಡು: ಜಿಲ್ಲೆಯ ನಾನಾ ಕಡೆ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ. ಕುಡ್ಲು ರಾಮದಾಸನಗರ ಶಿವಮಂಗಲದಲ್ಲಿ ಕಾಸರಗೋಡು ಅಬಕಾರಿ ಪ್ರಿವೆಂಟಿವ್ ಅಧಿಕಾರಿ ಸಿ.ಕೆ.ವಿ ಸುರೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ25.94ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.
ವೆಳ್ಳರಿಕುಂಡುವಿನಲ್ಲಿ ಕಾಸರಗೋಡು ಅಬಕಾರಿ ಎನ್‍ಫೋರ್ಸ್‍ಮೆಂಟ್ ನಡೆಸಿದ ಕಾರ್ಯಾಚರಣೆಯಲ್ಲಿ ಪಾಲಾಂವಯಲ್ ನಿವಾಸಿ ವಿಜಯನ್ ಎಂಬಾತನನ್ನು ಬಂಧಿಸಿದ್ದಾರೆ. ಈತನ ಜತೆಗಿದ್ದ ರೆಜಿ ಸೆಬಾಸ್ಟಿಯನ್ ಪರಾರಿಯಾಗಿದ್ದಾನೆ. ಇವರಿಂದ 25ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಸಾರಾಯಿ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪರಕರಣದಲ್ಲಿ ಬದಿಯಡ್ಕ ಅಬಕಾರಿ ದಲ ಸಿಬ್ಬಂದಿ ಉಬ್ರಂಗಳ ಕೊರೆಕ್ಕಾನದಲ್ಲಿ ನಡೆಸಿದ ಕಾರ್ಯಾಚರನೆಯಲ್ಲಿ ಎರಡುವರೆ ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಮಬಂಧಿಸಿ ಸತೀಶ ಎಂಬಾತನನ್ನು ಬಂಧಿಸಿದ್ದಾರೆ.
ಮಂಜೇಶ್ವರ ತಾಲೂಕಿನ ಕಯ್ಯಾರು ಪೆರ್ಮುದೆಯಲ್ಲಿ ಕುಂಬಳೆ ರೇಂಜ್ ಪ್ರಿವೆಂಟಿವ್ ಅಧಿಕಾರಿಮನಾಸ್ ಕೆ.ವಿ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 4.8ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂದೇಶ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಕಳನಾಡು ಕೀಯೂರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯಕೈವಶವಿರಿಸಿಕೊಂಡಿದ್ದ ಕಳನಾಡು ನಿವಾಸಿ ಬಿಜೇಶ್ ಡಿ. ಎಂಬಾತನ ವಿರುದ್ಧ ಕಾಸರಗೋಡು ಅಬಕಾರಿ ಪ್ರಿವೆಂಟಿವ್ ಅಧಿಕಾರಿಗಳು ಕೇಸು ದಾಖಲಿಸಿಕೊಂಡಿದ್ದಾರೆ. ಈತನಿಂದ ಬೀವರೇಜಸ್‍ನಿಂದ ಖರೀದಿಸಿದ್ದ ನಾಲ್ಕು ಲೀ. ವಿದೇಶಿ ಮದ್ಯ ವಶಪಡಿಸಿಕೊಂಡು, ಸಾಗಾಟಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.