ಮುಳ್ಳೇರಿಯ: ಜನವರಿ 25 ರಿಂದ 28 ರ ವರೆಗೆ ಮುಳ್ಳೇರಿಯಾ ರತ್ನಗಿರಿಯಲ್ಲಿ ನಡೆಯುವ "ಮುಳ್ಳೇರಿಯಾ ಟ್ರೇಡ್ ಫೆಸ್ಟಿವಲ್" ಕಚೇರಿಯನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಶುಕ್ರವಾರ ಉದ್ಘಾಟಿಸಿದರು. ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ ಗೋಪಾಲಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜನನಿ ಎಂ., ಮುಂಡೋಳು ಕ್ಷೇತ್ರ ಟ್ರಸ್ಟಿ ರಘುರಾಮ ಬಲ್ಲಾಳ್, ಕಾರಡ್ಕ ಪಂಚಾಯತಿ ಸದಸ್ಯ ಸಂತೋಷ್, ಸಿಡಿಎಸ್ ಅಧ್ಯಕ್ಷೆ ಸವಿತಾ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ವಸಂತ ಕಾರ್ಲೆ, ವಿಜಯ ಕುಮಾರ್, ಪುರುಷೋತ್ತಮನ್, ಕೃಷ್ಣನ್, ಇಕ್ಬಾಲ್, ಶಿವಕೃಷ್ಣ ಭಟ್, ಸದಾಶಿವ ಉಪಸ್ಥಿತರಿದ್ದು ಶುಭಹಾರೈಸಿದರು. ಮುಳ್ಳೇರಿಯಾ ಟ್ರೇಡ್ ಫೆಸ್ಟಿವಲ್ ನ ಸಂಘಟಕರು ಉಪಸ್ಥಿತರಿದ್ದರು.