ಅಯೋಧ್ಯೆ: ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪನೆಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

ಚಂಪತ್ ರೈ ಅವರು ಸೋಮವಾರ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಹೊಸ ಮೂರ್ತಿ ಜೊತೆಗೆ ಈಗಿನ ರಾಮ ಲಲ್ಲಾ ಮೂರ್ತಿಯನ್ನೂ ಮಂದಿರದಲ್ಲಿ ಇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಮೊದಲೇ ಅರುಣ್ ಯೋಗಿರಾಜ್ ಅವರು ಕೆತ್ತಿದ್ದ ಮೂರ್ತಿಯೇ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂದು ಸುದ್ದಿಯಾಗಿತ್ತು. ಆಗ ಟ್ರಸ್ಟ್, ಈ ವಿಷಯವನ್ನು ಖಚಿತಪಡಿಸಿರಲಿಲ್ಲ.
ಜನವರಿ 22 ಸೋಮವಾರದಂದು ರಾಮಮಂದಿರದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
ಅರುಣ್ ಅಲ್ಲದೇ, ಬೆಂಗಳೂರಿನ ಜಿ.ಎಲ್.ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಮೂರ್ತಿಗಳನ್ನು ಕೆತ್ತಿದ್ದರು.
ಮೂರ್ತಿ ಕೆತ್ತನೆ ಕುರಿತು ಪ್ರತಿಕ್ರಿಯಿಸಿದ್ದ ಅರುಣ್, 'ರಾಮ ಲಲ್ಲಾ ಮೂರ್ತಿ ಕೆತ್ತನೆಗೆ ಆರು ತಿಂಗಳು ಬೇಕಾಯಿತು. ಬಾಲ ರಾಮನ ವಿಗ್ರಹ ಇದಾಗಿದೆ. ಕೈಯಲ್ಲಿ ಬಿಲ್ಲು ಹಾಗೂ ಬಾಣ ಹಿಡಿದ ಮೂರ್ತಿ ಇದು. ಒಟ್ಟು ಮೂರು ವಿಗ್ರಹಗಳನ್ನು ಕೆತ್ತಲಾಗಿದೆ. ಅಂತಿಮವಾಗಿ ಇವುಗಳಲ್ಲಿ ಒಂದು ಪ್ರತಿಷ್ಠಾಪನೆಗೆ ಆಯ್ಕೆಯಾಗಲಿದೆ' ಎಂದು ತಿಳಿಸಿದ್ದರು. ಇದೀಗ ಅವರೇ ಕೆತ್ತಿರುವ ಮೂರ್ತಿ ಆಯ್ಕೆಯಾಗಿದೆ.
ಅರುಣ್ ಯೋಗಿರಾಜ್