ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಣಪ್ರತಿಷ್ಠಾ ಮಹೋತ್ಸವದ ಶುಭ ಸಂದಭರ್Àದಲ್ಲಿ ಸೋಮವಾರ `ಶ್ರೀರಾಮ ವೈಭವ’ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಯಿತು.
ಅಲಂಕೃತಗೊಂಡ ಶ್ರೀಮಠದ ನೂತನ ಶ್ರೀರಾಮನ ವಿಗ್ರಹದ ಮುಂಭಾಗದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ಅನುಗ್ರಹಿಸಿದರು. ವೈದಿಕ ವೃಂದದವರಿಂದ ಶ್ರೀರಾಮತಾರಕ ಯಜ್ಞ, ರಾಮತಾರಕ ಜಪ, ಸಾಮೂಹಿಕ ಭಜನಾ ಸಂಕೀರ್ತನೆ ನಡೆಯಿತು. ಇದೇ ಸಂದಭರ್ದಲ್ಲಿ ಅಯೋಧ್ಯೆಯಲ್ಲಿ ನಡೆಯುವ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ನೇರವೀಕ್ಷಣೆಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮಧ್ಯಾಹ್ನ ಹೋಮ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ಹಿರಿಯರಾದ ಮಾಧವ ಹೇರಳ ಎಡನೀರು, ಎಸ್.ಎಂ.ಉಡುಪ, ಶ್ರೀಮಠದ ಶಿಷ್ಯವೃಂದ, ಭಗವದ್ಭಕ್ತರು ಪಾಲ್ಗೊಂಡಿದ್ದರು.