ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ, ಐ.ಸಿ.ಡಿ.ಎಸ್ ಕಾಸರಗೋಡು, ಜನಮೈತ್ರಿ ಶಿಶು ಸಹೃದಯ ಪೆÇಲೀಸ್ ಠಾಣೆ ಕಾಸರಗೋಡು ಜಂಟಿ ಸಹಯೋಗದೊಂದಿಗೆ ವಿಜಿಲೆನ್ಸ್ ಸಮಿತಿ ಕಾರ್ಯಾಗಾರ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ಕಲ್ಲಂಗೈ ಸಾಲ್ವ ಆಡಿಟೋರಿಯಂನಲ್ಲಿ ಜರುಗಿತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ಬಿಜಾಯ್ ಐಪಿಎಸ್ ಉದ್ಘಾಟಿಸಿದರು.
ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಕೀಲ ಸಮೀರಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಠಾಣೆ ಸಬ್ ಇನ್ಸ್ ಪೆಕ್ಟರ್. ಕೆಪಿ ವಿನೋದ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಕೆ. ಮಧು, ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಸುರೇಶ್ ಕಾನಂ, ಗ್ರಾ.ಪಂ.ಸದಸ್ಯರಾದ ಸಂಪತ್ ಕುಮಾರ್, ನೌಫಲ್ ಪುತ್ತೂರು, ಸುಲೋಚನಾ, ಮಲ್ಲಿಕಾ, ಪಂಚಾಯಿತಿ ಐಸಿಡಿಎಸ್ ಮೇಲ್ವಿಚಾರಕಿ ಕಾವ್ಯಶ್ರೀ, ಸಿ.ಡಿ.ಎಸ್ ಅಧ್ಯಕ್ಷೆ ರಜಿಯಾ ಮೊಗರ್, ಕರೀಂ ಚೌಕಿ, ಶಾಜಿ, ಇರ್ಷಾದ್, ಹನೀಫ್, ಸುಧೀರ್, ಎಂ. ಎ. ನಜೀಬ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರ್ ಸ್ವಾಗತಿಸಿದರು. ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್ ವಂದಿಸಿದರು.