HEALTH TIPS

ಮಾಲ್ಡೀವ್ಸ್‌ ಸಚಿವೆಯ ಹೇಳಿಕೆಗೆ ವಿರೋಧ: ಟ್ರೆಂಡ್ ಆಯ್ತು ಹ್ಯಾಶ್‌ ಟ್ಯಾಗ್‌

                ವದೆಹಲಿ: ಪ್ರಧಾನಿ ಮೋದಿ ಅವರ ಲಕ್ಷದ್ವೀಪ ಭೇಟಿಯ ಕುರಿತಂತೆ ಮಾಲ್ಡೀವ್ಸ್‌ ಸಚಿವೆ ಮರಿಯಮ್‌ ಶಿಯುನಾ ಅವರ ಹೇಳಿಕೆ ಇದೀಗ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಇದರ ನಡುವೆಯೇ #boycottmaldives ಹ್ಯಾಶ್‌ ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

              ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅಲ್ಲಿನ ಕಳೆದ ಕ್ಷಣಗಳ ವಿಡಿಯೊ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಭೇಟಿಯ ಕುರಿತಂತೆ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದ ಸಚಿವೆ ಮರಿಯಮ್‌ ಶಿಯುನಾ ಅವರು ಪ್ರಧಾನಿ ಮೋದಿ ಮತ್ತು ಭಾರತವನ್ನು ಟೀಕಿಸಿ ಹೇಳಿಕೆ ನೀಡಿದ್ದರು.


             ಮಾಲ್ಡೀವ್ಸ್‌ ಸಚಿವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಮಾಲ್ಡೀವ್ಸ್‌ಗೆ ಪ್ರವಾಸ ಹೋಗುವ ತಮ್ಮ ಪ್ಲ್ಯಾನ್‌ ಅನ್ನು ರದ್ದುಗೊಳಿಸಿರುವುದಾಗಿ ಅನೇಕ ಭಾರತೀಯ ಪ್ರವಾಸಿಗರು ಹೇಳಿಕೊಂಡಿದ್ದಾರೆ. ಹೋಟೆಲ್ ಮತ್ತು ವಿಮಾನ ಟಿಕೆಟ್‌ ಅನ್ನು ರದ್ದುಗೊಳಿಸಿರುವ ಸ್ಕ್ರಿನ್‌ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ #boycottmaldives ಹ್ಯಾಶ್‌ ಟ್ಯಾಗ್‌ ಬಳಸಿರುವುದು ಕಂಡುಬಂದಿದೆ.

              ಏತನ್ಮಧ್ಯೆ, ಸಚಿವೆಯ ಹೇಳಿಕೆಗೆ ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ' ಸಚಿವರೊಬ್ಬರು ಮಿತ್ರರಾಷ್ಟ್ರದ ನಾಯಕರ ಬಗ್ಗೆ ಇಂತಹ ತೀಕ್ಷ್ಣ ಭಾಷೆ ಬಳಸಿರುವುದು ಸರಿಯಲ್ಲ. ಇಂತಹ ಹೇಳಿಕೆಗಳು ಸರ್ಕಾರದ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಮೊಹಮ್ಮದ್‌ ಮುಯಿಝು ಅವರ ಸರ್ಕಾರ ಭಾರತಕ್ಕೆ ಸ್ಪಷ್ಟನೆ ನೀಡಬೇಕಿದೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries