ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಶ್ರೀರಾಮ ಕಲ್ಪೋಕ್ತ ಪೂಜಾ ಸಹಿತ ಸುಂದರಕಾಂಡ ಪಾರಾಯಣ ಶ್ರೀ ಸುದರ್ಶನ ಶರ್ಮ ಕಾರ್ಮಾರು ಇವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಜರಗಿತು.
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರ, ಮಧ್ಯಾಹ್ನ ಅನ್ನದಾನ ಸೇವೆ, ಸಂಜೆ ಶ್ರೀ ಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ ಇವರಿಂದ ಭಜನೆ, ದೀಪಲಂಕಾರ ಸಹಿತ ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಅಲಂಕಾರ ಪೂಜೆ ಜರಗಿತು.