ಮಂಜೇಶ್ವರ: ಕಣ್ಬತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದಲ್ಲಿ ನೂತನ ಸುತ್ತು ಪೌಳಿಯನ್ನು ಬ್ರಹ್ಮಕಲಶ ಮಾಡಿ ಸಮರ್ಪಿಸಿ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ದೇವರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆಯ ವಿಶ್ವಸ್ಥ ಮಂಡಳಿಯ ಟ್ರಸ್ಟಿಗಳಾದ ಉಡುಪಿ ಪೇಜಾವರ ಅಧೊಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳು ಬೋವಿ ಸಮಾಜದ ಭಗವತೀ ಕ್ಷೇತ್ರದ ಕಾರ್ಣವರು ಮತ್ತು ಮೊಗವೀರ ಬಂಧುಗಳು ಜೊತೆಯಾಗಿ ಕಣ್ವತೀರ್ಥ ಸಮುದ್ರಕ್ಕೆ ಹಾಲೆರೆದು ಹಿಂಗಾರ ಹೂ ಸಮರ್ಪಿಸಿ ಇತ್ತೀಚೆಗೆ ಸಮುದ್ರ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲ ಶೆಟ್ಟಿ ಅರಿಬೈಲು, ಸುಧಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಭಟ್ ಪೆರಂಪಳ್ಳಿ, ಇಂದುಶೇಖರ್ ಭಟ್ ಉಡುಪಿ, ರಘು ರಾಮ್ ಆಚಾರ್ಯ ಉಡುಪಿ, ಸುಧಾಕರ ಅಡ್ಯಂತಾಯ ತಲಪಾಡಿ, ಗ್ರಾ.ಪಂ.ಸದಸ್ಯ ಲಕ್ಷ್ಮಣ, ಚಂದ್ರಶೇಕರ ಕಣ್ವತೀರ್ಥ, ಜ್ಯೋತಿ ಶೆಟ್ಟಿ ಮಂಜೇಶ್ವರ ಸಹಿತ ಹಲವು ಕ್ಷೇತ್ರದ ಭಜನಾ ಮಂಡಳಿ, ಧರ್ಮಸ್ಥಳ ಸ್ವಸಹಾಯ ಸಂಘ ಮತ್ತು ಸ್ಥಳೀಯರು ಭಾಗವಹಿಸಿದ್ದರು.