ಮುಂಬೈ: ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ (ಸಿಎಸ್‌ಎಂಟಿ) ಬಳಿ ನೂರಕ್ಕೂ ಹೆಚ್ಚು ಮರಾಠ ಪ್ರತಿಭಟನಕಾರರು ಶುಕ್ರವಾರ ಪ್ರತಿಭಟಿಸಿದರು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಮುಂಬೈ: ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ (ಸಿಎಸ್‌ಎಂಟಿ) ಬಳಿ ನೂರಕ್ಕೂ ಹೆಚ್ಚು ಮರಾಠ ಪ್ರತಿಭಟನಕಾರರು ಶುಕ್ರವಾರ ಪ್ರತಿಭಟಿಸಿದರು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಆಜಾದ್ ಮೈದಾನಕ್ಕೆ ತೆರಳುತ್ತಿದ್ದ ಪ್ರತಿಭಟನಕಾರರು, ಸಿಎಸ್‌ಎಂಟಿ ಮತ್ತು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಬಳಿಯ ಕೂಡುರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು.
ಮಧ್ಯಾಹ್ನದ ಬಳಿಕ ಮಹಾನಗರ ಪಾಲಿಕೆ ಮಾರ್ಗ ಹಾಗೂ ಡಿ.ಎನ್.ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ ಅಧಿಕಾರಿಗಳು, ಬಸ್‌ಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಿದರು.
ಮರಾಠ ಮೀಸಲಾತಿಗಾಗಿ ಒತ್ತಾಯಿಸಿ ಮನೋಜ್ ಜಾರಾಂಗೆ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಅಪಾರ ಸಂಖ್ಯೆಯ ಪ್ರತಿಭಟನಕಾರರು ನವಿ ಮುಂಬೈನಲ್ಲಿ ಜಮಾಯಿಸಿದ್ದರು. ಹೋರಾಟಗಾರರು ಮುಂಬೈ ಪ್ರವೇಶಿಸದಂತೆ ಸರ್ಕಾರವು ಮನವೊಲಿಸುತ್ತಿದೆ.