ತಿರುವನಂತಪುರಂ: ಚುನಾವಣೆ ಗೆಲ್ಲಲು ನಕಲಿ ಗುರುತಿನ ಚೀಟಿ ತಯಾರಿಸಿದ ಪ್ರಕರಣದಲ್ಲಿ ಯುವ ಕಾಂಗ್ರೆಸ್ ಸಂಘಟನೆಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಸಿಆರ್ ಕಾರ್ಡ್ ಆ್ಯಪ್ ರಚಿಸಿದವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ತಿರುವನಂತಪುರಂ ಮ್ಯೂಸಿಯಂ ಪೋಲೀಸರು ಕಾಞಂಗಾಡ್ ಮೂಲದ ರಾಕೇಶ್ ಅರವಿಂದ್ ಎಂಬಾತನನ್ನು ಬಂಧಿಸಿದ್ದು, ಈತ ಮುಖ್ಯಸ್ಥ ಜೇಸನ್‍ನ ಸಹಾಯಕನಾಗಿದ್ದ. ಸಿಆರ್ ಕಾರ್ಡ್ ಎಂಬ ಆ್ಯಪ್ ಮೂಲಕ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಲಾಗಿದೆ.
ನಕಲಿ ಗುರುತಿನ ಚೀಟಿ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವಹಿಸಬೇಕು ಎಂದು ಪೋಲೀಸರು ಮನವಿ ಮಾಡಿದ್ದರು. ಸದ್ಯದಲ್ಲೇ ಅಪರಾಧ ವಿಭಾಗದ ಪೋಲೀಸರು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಎಡಿಜಿಪಿಗೆ ಪೋಲೀಸರು ನೀಡಿದ ವರದಿ ಪ್ರಕಾರ, ಪ್ರಕರಣದಲ್ಲಿ ವಿಸ್ತೃತ ತನಿಖೆ ಅಗತ್ಯವಿದ್ದು, ರಾಜ್ಯಾದ್ಯಂತ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗುತ್ತಿದೆ.