ನವದೆಹಲಿ: ಭಾರತದ ಬಾಸ್ಮತಿ ಅಕ್ಕಿ ವಿಶ್ವದ ಅತ್ಯುತ್ತಮ ಅಕ್ಕಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕ್ರೊಯೇಷಿಯಾ ಮೂಲದ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ 2022-23ನೇ ಸಾಲಿನ ವರ್ಷಾಂತ್ಯದ ಪ್ರಶಸ್ತಿಗಳ ಭಾಗವಾಗಿ ಈ ಘೊಷಣೆ ಮಾಡಿದೆ.
ಬಾಸ್ಮತಿಯನ್ನು ಮೂಲತಃ ಭಾರತ ಮತ್ತು ಪಾಕಿಸ್ತಾನದಲ್ಲಿ ಬೆಳೆಯುವ ದೀರ್ಘ ಧಾನ್ಯದ ಅಕ್ಕಿ ಎಂದು ಟೇಸ್ಟ್ ಅಟ್ಲಾಸ್ ಉಲ್ಲೇಖಿಸಿದೆ.
ಭಾರತವು ಸುಮಾರು 34 ಬಗೆಯ ಬಾಸ್ಮತಿ ಅಕ್ಕಿಯನ್ನು ಬೆಳೆಯುತ್ತದೆ. ಬಾಸ್ಮತಿ 217, ಬಾಸ್ಮತಿ 370, ಟೈಪ್ 3 (ಡೆಹ್ರಾದುನಿ ಬಾಸ್ಮತಿ) ಪಂಜಾಬ್ ಬಾಸ್ಮತಿ 1 (ಬೌನಿ ಬಾಸ್ಮತಿ), ಪೂಸಾ ಬಾಸ್ಮತಿ 1, ಕಸ್ತೂರಿ, ಹರಿಯಾಣ ಬಾಸ್ಮತಿ 1, ಮಾಹಿ ಸುಗಂಧ, ತಾರೋರಿ ಬಾಸ್ಮತಿ (ಎಚ್ಬಿಸಿ 19 / ಕರ್ನಾಲ್ ಸ್ಥಳೀಯ), ರಣಬೀರ್ ಬಸ್ಮತಿ ಅದರಲ್ಲಿ ಸೇರಿವೆ. ಭಾರತವು ಸೌದಿ ಅರಬ್, ಇರಾನ್, ಇರಾಕ್, ಯುನೈಟೆಡ್ ಅರಬ್ ಇಎಂಟಿಗಳು ಮತ್ತು ಯೆಮೆನ್ ರಿಪಬ್ಲಿಕ್ ದೇಶಗಳಿಗೆ ಬಾಸ್ಮತಿ ಅಕ್ಕಿಯ ಪ್ರಮುಖ ರಫ್ತುದಾರನಾಗಿದೆ ಎಂದು ಸರ್ಕಾರಿ ಸಂಸ್ಥೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಹೇಳಿದೆ. ಇತ್ತೀಚೆಗೆ ಆಹಾರ ಮಾರ್ಗದರ್ಶಿಯು ವಿಶ್ವ ಪಟ್ಟಿಯಲ್ಲಿನ ಗೌರವಾನ್ವಿತ 100 ಅತ್ಯುತ್ತಮ ತಿನಿಸುಗಳ ಪಟ್ಟಿಯಲ್ಲಿ ಭಾರತಕ್ಕೆ 11ನೇ ಸ್ಥಾನ ನೀಡಿದೆ. ಟೇಸ್ಟ್ ಅಟ್ಲಾಸ್ ಭಾರತೀಯ ತಿನಿಸುಗಳಿಗೆ ಮಾನ್ಯತೆ ನೀಡಿದೆ. ವಿಶ್ವದ 100 ಅತ್ಯಂತ ಪ್ರಸಿದ್ಧ ಉಪಹಾರಗೃಹ ಮತ್ತು ಐಕಾನಿಕ್ ಡೆಸರ್ಟ್ ಸ್ಥಳಗಳ ಪಟ್ಟಿಯಲ್ಲಿ ಹಲವಾರು ಭಾರತೀಯ ಸಂಸ್ಥೆಗಳು ಸೇರಿಸಿದೆ.
5 ಅಗ್ರಸ್ಥಾನ ಪಡೆದ ದೇಶಗಳು
ವಿಶ್ವದ ಅತ್ಯುತ್ತಮ ಅಕ್ಕಿಗಳ ಶ್ರೇಯಾಂಕದಲ್ಲಿ ಭಾರತ ಮೊದಲ ಸ್ಥಾನ ಪಡೆದರೆ. ನಂತರದ ಸ್ಥಾನಗಳನ್ನು ಅನುಕ್ರಮವಾಗಿ ಇಟಲಿಯ ಅರ್ಬೆರಿಯೊ, ಪೋರ್ಚುಗಲ್ನ ಅರೋಜ್ ಕ್ಯಾರೊಲಿನೊ ದಾಸ್ ಲೆಜಿರಿಯಾಸ್ ರಿಬಾಟೆಜಾನಾಸ್, ಸ್ಪೇನ್ನಿಂದ ಅರೋಜ್ ಬೊಂಬಾ, ಜಪಾನಿನ ಉರುಚಿಮೈ ಪಡೆದುಕೊಂಡಿವೆ.