ಇಂಫಾಲ್: ಮಣಿಪುರದ ತೆಂಗ್‌ನೌಪಾಲ್ ಜಿಲ್ಲೆಯ ಗಡಿ ನಗರದವಾದ ಮೊರೆಹ್‌ನಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ಕುಕಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್: ಮಣಿಪುರದ ತೆಂಗ್‌ನೌಪಾಲ್ ಜಿಲ್ಲೆಯ ಗಡಿ ನಗರದವಾದ ಮೊರೆಹ್‌ನಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ಕುಕಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊರೆಹ್‌ನ ಎಸ್‌ಬಿಐ ಸಮೀಪದಲ್ಲಿರುವ ಭದ್ರತಾ ಪೋಸ್ಟ್ ಮೇಲೆ ಉಗ್ರರು ಬಾಂಬ್ ಎಸೆದು ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಷ್ಟೇ.
ಪೊಲೀಸ್ ಸಿಬ್ಬಂದಿಗಳನ್ನು ಕೊಲೆ ಮಾಡಿ ಪ್ರಕರಣ ಸಂಬಂಧ ರಾಜ್ಯದ ಪೊಲೀಸರು ಇಬ್ಬರು ಶಂಕಿತ ಕುಕಿ ಉಗ್ರರನ್ನು ಬಂಧಿಸಿದ್ದಾರೆ. ಇದಾದ 48 ಗಂಟೆ ಬಳಿಕ ಈ ಘಟನೆ ನಡೆದಿದೆ.
ಗುಂಡಿನ ದಾಳಿ ನಡೆಯುವುದಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಜ.16ರಂದು ಮಧ್ಯರಾತ್ರಿ 12ರಿಂದ ಕರ್ಫ್ಯೂ ವಿಧಿಸಲಾಗಿತ್ತು.