ತಿರುವನಂತಪುರಂ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂತ್ತಿಲ್‍ಗೆ ಜಾಮೀನು ಮಂಜೂರಾಗಿದೆ. ಬಂಧನ ನಡೆದು ಎಂಟನೇ ದಿನಕ್ಕೆ ಜಾಮೀನು ನೀಡಲಾಗಿದೆ. ರಾಹುಲ್ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಸೆಕ್ರೆಟರಿಯೇಟ್ ಪ್ರತಿಭಟನೆ(ಮಾರ್ಚ್) ವೇಳೆ ನಡೆದ ದಾಳಿಗೆ ಸಂಬಂಧಿಸಿದಂತೆ ಕಂಟೋನ್ಮೆಂmಟ್ಪೋಲೀಸರು ರಾಹುಲ್ ಅವರನ್ನು ಬಂದಿಸಲಾಗಿತ್ತು. ನಂತರ, ಈ ಪ್ರಕರಣಗಳಲ್ಲಿ ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಲಾಯಿತು ಮತ್ತು ಪ್ರೊಡಕ್ಷನ್ ವಾರಂಟ್‍ಗಳನ್ನು ನೀಡಲಾಯಿತು. ಗರಿಷ್ಠ ದಿನಗಳ ಕಾಲ ರಾಹುಲ್ ಅವರನ್ನು ಜೈಲಿನಲ್ಲಿಡಬೇಕು ಎಂಬುದು ಉನ್ನತ ಅಧಿಕಾರಿಗಳ ನಿರ್ದೇಶನವಾಗಿತ್ತು. ಬುಧವಾರ ಮಧ್ಯಾಹ್ನದ ನಂತರ ಎರಡು ಪ್ರಕರಣಗಳಲ್ಲಿ ಸಿಜೆಎಂ ನ್ಯಾಯಾಲಯ ರಾಹುಲ್‍ಗೆ ಜಾಮೀನು ಮಂಜೂರು ಮಾಡಿದೆ. ನಿನ್ನೆ ಎರಡು ಪ್ರಕರಣಗಳಲ್ಲಿ ಜಾಮೀನು ಮಂಜೂರಾಗಿತ್ತು.
25,000 ಠೇವಣಿ ಇಡಬೇಕು ಮತ್ತು ಪ್ರತಿ ಮಂಗಳವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ. ಇವೆಲ್ಲ ಮುಗಿದ ಮೇಲೆ ರಾಹುಲ್ ಇಂದು ಅಥವಾ ನಾಳೆ ಹೊರಗೆ ಬರಬಹುದು. ಬಂಧನವಾಗಿ ಎಂಟು ದಿನಗಳು ಕಳೆದಿರುವುದರಿಂದ ಕಾಂಗ್ರೆಸ್ ಬೆಂಬಲಿಗರು ಇಂದು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹೊರ ಬರಲಿರುವ ರಾಹುಲ್‍ಗೆ ಅದ್ಧೂರಿ ಸ್ವಾಗತವನ್ನು ಏರ್ಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ.