ಕುಂಬಳೆ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಅಭೂತಪೂರ್ವ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ ಐವತ್ತು ವರ್ಷಗಳಿಂದ ಕಾರ್ಯವೆಸಗುತ್ತಿರುವ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘದ ಆಶ್ರಯದಲ್ಲಿ ಶ್ರೀರಾಮದರ್ಶನ ಆಖ್ಯಾಯಿಕೆಯ ಯಕ್ಷಗಾನ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕಂಬಾರು ಕೇಶವ ಭಟ್, ವಸಂತಕುಮಾರ್ ದೊಡ್ಡಮಾಣಿ, ಲಕ್ಷ್ಮೀಶ ಬೇಂಗ್ರೋಡಿ, ಕೃಷ್ಣಮೂರ್ತಿ ಪಾಡಿ ಹಾಗೂ ಪಾತ್ರವರ್ಗದಲ್ಲಿ ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಉದಯಶಂಕರ ಭಟ್ ಮಜಲು, ಸದಾಶಿವ ಗಟ್ಟಿ ನಾಯ್ಕಾಪು, ನಾರಾಯಣ ಜಿ ಹೆಗಡೆ, ಶಿವಾನಂದ ಕುಂಬಳೆ, ಸದಾಶಿವ ಮುಳಿಯಡ್ಕ, ಜನಾರ್ದನ ಆಚಾರ್ಯ ನಾಯ್ಕಾಪು ಸಹಕರಿಸಿದರು.