ಜಲ್‌ಪೈಗುರಿ (PTI): ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ 'ಆಲ್ ಕಾಮ್ತಾಪುರ ಸ್ಟುಡೆಂಟ್ಸ್ ಯೂನಿಯನ್' (ಎಕೆಎಸ್‌ಯು) ಕಾರ್ಯಕರ್ತರು ಶುಕ್ರವಾರ ಜಲ್‌ಪೈಗುರಿ ಜಿಲ್ಲೆಯಲ್ಲಿ ರೈಲು ತಡೆ ನಡೆಸಿ ಪ್ರತಿಭಟಿಸಿದರು. ಪರಿಣಾಮವಾಗಿ ರೈಲ್ವೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ನಾರ್ಥ್ ಫ್ರಂಟಿಯರ್ ರೈಲ್ವೆ (ಎನ್‌ಎಫ್‌ಆರ್) ವಿಭಾಗದ ನ್ಯೂ ಜಲ್‌ಪೈಗುರಿ-ನ್ಯೂ ಬೋಂಗೈಗಾಂವ್‌ನ ಬೆಟ್ಗಾರ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಪ್ರತಿಭಟನೆ ಮೂರು ತಾಸುಗಳ ಕಾಲ ನಡೆಯಿತು. ನಂತರ ಆರ್‌ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿ, ಹೋರಾಟಗಾರ ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು ಎಂದು ಎನ್‌ಎಫ್‌ಆರ್‌ನ ವಕ್ತಾರ ತಿಳಿಸಿದ್ದಾರೆ.
ಪ್ರತಿಭಟನೆಯ ಪರಿಣಾಮವಾಗಿ ನ್ಯೂ ಜಲ್‌ಪೈಗುರಿ-ಗುವಾಹಟಿ ವಂದೇ ಭಾರತ್ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.