ಕಾಸರಗೋಡು: ನವ ಕೇರಳಕ್ಕಾಗಿ ಜನತಾ ಯೋಜನೆ ಎಂಬ ಸಂದೇಶದೊಂದಿಗೆ ಕಾಞಂಗಾಡ್ ಬ್ಲಾಕ್ ಪಂಚಾಯತ್ 2024-25 ವರ್ಷದ ಯೋಜನೆ ರಚನೆಗಾಗಿ ಗ್ರಾಮ ಸಭೆಯನ್ನು ಆಯೋಜಿಸಿತು. ಜಿಲ್ಲಾ ಯೋಜನಾ ಸಮಿತಿ ಸದಸ್ಯ ವಿ. ವಿ. ರಮೇಶನ್ ಸಭೆ ಉದ್ಘಾಟಿಸಿದರು.
ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಟಿ.ಶೋಭಾ, ಪಿ.ಲಕ್ಷ್ಮಿ, ಎಸ್.ಪ್ರೀತಾ, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಸೀತಾ, ಎಂ.ಕೆ.ವಿಜಯನ್, ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಪಿ.ಯುಜಿನ್ ಉಪಸ್ಥಿತರಿದ್ದರು. ಯೋಜನಾ ಸಮಿತಿ ಉಪಾಧ್ಯಕ್ಷ ಎಂ.ಮಾಧವನ್ ನಂಬಿಯಾರ್ ಯೋಜನೆಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಂತರ ವಿವಿಧ ಗುಂಪುಗಳಾಗಿ ವಿಂಗಡಿಸಿ ಚರ್ಚಿಸಿ ಯೋಜನೆಯ ಚಟುವಟಿಕೆಗಳನ್ನು ಕ್ರೋಡೀಕರಿಸಲಾಯಿತು.