ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಯ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಜ. 12ರಂದು ಆಯೋಜಿಸಲಾಗಿದೆ. ಪ್ರಭಾರ ಉಪಕುಲಪತಿ ಪೆÇ್ರ. ಕೆ.ಸಿ. ಬೈಜು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಅಂಗವಾಗಿ ಸೈಕಲ್ ರ್ಯಾಲಿ, ರಸಪ್ರಶ್ನೆ ಸ್ಪರ್ಧೆ, ಪುಷ್ಪಾರ್ಚನೆ ಮೊದಲಾದ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.