ಕಾಸರಗೋಡು: ಪಾಲಕ್ಕಾಡ್ ಮನ್ನಾಕ್ರ್ಕಾಡ್ ಮೂಲದ ಅಬ್ದುಲ್ ಸಲಾಂ ಎಂಬವರ ಪುತ್ರ ಮುಹಮ್ಮದ್ ರಫೀಕ್ ಅವರು ಪಾಲಕ್ಕಾಡ್ ನ ಮನ್ನಾಕ್ರ್ಕಾಡ್ ನಲ್ಲಿರುವ ತಮ್ಮ ಮನೆಯನ್ನು ಕಳೆದೊಂದು ವಾರದಿಂದ ತೊರೆದು ನಾಪತ್ತೆಯಾಗಿದ್ದ. ಈ ಮಧ್ಯೆ ಜ.17 ರಂದು ರಾತ್ರಿ ಕಾಸರಗೋಡು ಕಂಟ್ರೋಲ್ ರೂಂ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಸಂಜೀವ್ ಕುಮಾರ್ ರವರು ಟ್ರ್ಯಾಕ್ ಮೇಲೆ ಅಸ್ತವ್ಯಸ್ತವಾಗಿ ನಡೆದುಕೊಂಡು ಹೋಗುತ್ತಿದ್ದ ಮುಹಮ್ಮದ್ ರಫೀಕ್ ನನ್ನು ಗಮನಿಸಿ ಕಾಸರಗೋಡು ಪೋಲೀಸರಿಗೆ ಒಪ್ಪಿಸಿದ್ದರು. ಕಾಸರಗೋಡು ಎಸ್‍ಎಚ್‍ಒ ಅಜಿತ್ ಕುಮಾರ್ ಅವರ ಸೂಚನೆ ಮೇರೆಗೆ ಕಾಸರಗೋಡು ಜನಮೈತ್ರಿ ಪೋಲೀಸರು ಮನ್ನಾಕ್ರ್ಕಾಡ್ ಪೋಲೀಸರನ್ನು ಸಂಪರ್ಕಿಸಿದರು. ಮಹಮ್ಮದ್ ರಫೀಕ್ ಸಂಬಂಧಿಕರಿಗೆ ನೀಡಿದ ಮಾಹಿತಿಯಂತೆ ತಂದೆ ನಿನ್ನೆ ಮಧ್ಯಾಹ್ನ ಠಾಣೆಗೆ ಹಾಜರಾಗಿ ಕಾಸರಗೋಡು ಪೋಲೀಸರ ಸಮ್ಮುಖದಲ್ಲಿ ಮಗನನ್ನು ಬರಮಾಡಿಕೊಂಡು ಕಾಸರಗೋಡು ಜನರಲ್ ಆಸ್ಪತ್ರೆ ತಲುಪಿ ಪ್ರಥಮ ಚಿಕಿತ್ಸೆ ಕೊಡಿಸಿ ತಂದೆಯೊಂದಿಗೆ ಮನೆಗೆ ತೆರಳಿದ್ದಾರೆ.