ಪತ್ತನಂತಿಟ್ಟ: ಶಬರಿಮಲೆಯಲ್ಲಿ ಕಾಣಿಕೆ ಎಣಿಕೆಗೂ ಮುನ್ನವೇ ದಾಖಲೆಯ ಆದಾಯ ಕಂಡುಬಂದಿದೆ. ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಹತ್ತು ಕೋಟಿಯಷ್ಟು ಹೆಚ್ಚಳವಾಗಿದೆ.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.
2023-24ರ ಶಬರಿಮಲೆ ಮಂಡಲ-ಮಕರ ಬೆಳಕು ಅವಧಿಯಲ್ಲಿ 357.47 ಕೋಟಿ ಆದಾಯ ಬಂದಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ಶಬರಿಮಲೆಯಲ್ಲಿ 357,47,71,909 ರೂ. ಲಭಿಸಿದೆ. ಕಳೆದ ವರ್ಷ 347.12 ಕೋಟಿ ರೂ ಲಭಿಸಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ 10.35 ಕೋಟಿ (10,35,55,025) ಹೆಚ್ಚಳವಾಗಿದೆ. ಅರವಣ ಮಾರಾಟದಿಂದ 146,99,37,700 ಆದಾಯ ಬಂದಿದೆ. ಅಪ್ಪ ಪ್ರಸಾದ ಮಾರಾಟದ ಮೂಲಕ ರೂ.17,64,77,795 ಆದಾಯ ಬಂದಿದೆ. ಏತನ್ಮಧ್ಯೆ, ಇನ್ನೂ ಪೂರ್ಣ ಪ್ರಮಾಣದ ಕಾಣಿಕೆ ಎಣಿಸಲಾಗಿಲ್ಲ ಮತ್ತು 10 ಕೋಟಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆಯಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದರು.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.ಸನ್ನಿಧಾನಕ್ಕೆ ಈ ಬಾರಿ 50 ಲಕ್ಷ (50,06412) ಅಯ್ಯಪ್ಪ ಭಕ್ತರು ಆಗಮಿಸಿದ್ದರು. ಕಳೆದ ವರ್ಷ 44 ಲಕ್ಷ ಭಕ್ತರು ಬಂದಿದ್ದರು.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ.