ಉಪ್ಪಳ: ಶಂಪಾ ಪ್ರತಿಷ್ಠಾನ ಬೆಂಗಳೂರು ವತಿಯಿಂದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ.ಎನ್ ಮೂಡಿತ್ತಾಯ ಅವರ ಕುರಿತಾಗಿ ಡಾ. ಪ್ರಮಿಳಾ ಮಾಧವ್ ರಚಿಸಿದ 'ಸದ್ದಿಲ್ಲದ ಸಾಧಕ'ಕೃತಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಜ. 26ರಂದು ಬೆಳಗ್ಗೆ 10ರಿಂದ ಪೈವಳಿಕೆ ಸನಿಹದ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ಜರುಗಲಿದೆ.
ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಡಾ. ಪಿ.ಶ್ರೀಕೃಷ್ಣ ಭಟ್ ಸಮಾರಂಭ ಉದ್ಘಾಟಿಸುವರು.ಡಾ. ಪ್ರಮೀಳಾ ಮಾಧವ್ ಪ್ರಾಸ್ತಾವಿಕ ಮಾತುಗಳನ್ನಾಡುವರು. ಕ.ಸಾ.ಪ ಕೇರಳ ಗಡಿನಾಡ ಘಟಕ ಅದ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಟಿ.ಎ.ಎನ್ ಖಂಡಿಗೆ ಕೃತಿ ಲೋಕಾರ್ಪಣೆಗೈದು ಕೃತಿಯ ಬಗ್ಗೆ ಮಾತನಾಡುವರು. ಪ್ರೊ. ಪಿ.ಎನ್ ಮೂಡಿತ್ತಾಯ ಉಪಸ್ಥಿತರಿರುವರು. ಈ ಸಂದರ್ಭ ಪ್ರೊ. ಪಿ.ಎನ್ ಮೂಡಿತ್ತಾಯ ಅವರ ಕೃತಿಗಳ ಬಗ್ಗೆ ವಿಚಾರಮಂಡನೆ ನಡೆಯುವುದು.ಸಾಂಸ್ಕøತಿಕ ಕಾರ್ಯಕ್ರಮ ಅಭಿನಂದಿತರೊಂದಿಗೆ ಸಂವಾದ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುವುದು.
ಸಂಜೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು.ಡಾ. ವಸಂತ ಕುಮಾರ್ ಪೆರ್ಲ ಅಭಿನಂದನಾ ಭಾಷಣ ಮಾಡುವರು.ಕಾಸರಗೊಡು ಚಿನ್ನಾ ಹಾಗೂ ಇತರರು ಪಾಲ್ಗೊಳ್ಳುವರು.