ಕಾಸರಗೋಡು: ಎನ್‍ಡಿಎ ರಾಜ್ಯಾಧ್ಯಕ್ಷ ಕೆ. ಸಉರೇಂದ್ರನ್ ನೇತೃತ್ವದಲ್ಲಿ ಕಾಸರಗೋಡಿನಿಂದ ಆರಂಭಗೊಂಡಿರುವ ಪಾದಯಾತ್ರೆ ಪೂರ್ವಭಾವಿಯಾಗಿ ಸ್ನೇಹ ಸಂಗಮ ಕಾರ್ಯಕ್ರಮ ಕಾಸರಗೋಡು ಕೋಟೆಕಣಿ ಜೀವಾಸ್ ಸಭಾಂಗಣದಲ್ಲಿ ಜರುಗಿತು.
ಸಮಾಜವ ವಿವಿಧ ಸಮುದಾಯಗಳ ಜನರೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಆವಂತ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ರಾಜ್ಯಪಾಲರಿಗೆ ಸುರಕ್ಷತೆಯಿಲ್ಲದ ಸ್ಥಿತಿಯಿದ್ದು, ಇದು ರಾಜ್ಯದಲ್ಲಿನ ಅರಾಜಕತೆಯನ್ನು ಸೂಚಿಸುತ್ತಿದೆ. ದೇಶದ ಇತಿಹಾಸದಲ್ಲಿ ರಾಜ್ಯಪಾಲರು ಭಯದ ವಾತಾವರಣದಲ್ಲಿ ಕಾಲಕಳೆಯಬೇಕಾದ ಅನಿವಾರ್ಯ ಸ್ಥಿತಿ ಇದೇ ಮೊದಲಬಾರಿಗೆ ಕೇರಳದಲ್ಲಿ ಕಾಣುವಂತಾಗಿದೆ. ಭ್ರಷ್ಟಾಚಾರಕ್ಕೆ ಬೆಮಬಲವಾಗಿ ನಿಲ್ಲದ ರಾಜ್ಯಪಾಲರನ್ನು ಇಲ್ಲಿ ಬೆಟೆಯಾಡಲಾಗುತ್ತಿದೆ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾತ್ರ ಏಕ ಭರವಸೆಯಾಗಿ ಉಳಿದಿರುವುದಾಗಿ ತಿಳಿಸಿದರು.
ಡಾ. ಜಯಪ್ರಕಾಶ್‍ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ವಿದೇಶಾಂಗ ಖಾತೆ ಸಹಾಯಕ ಸಚಿವ ವಿ. ಮುರಳೀಧರನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಚಿನ್ಮಯ ಮಿಶನ್ ರಾಜ್ಯ ಸಮಿತಿ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಬಿಡಿಜೆಎಸ್‍ನ ತುಷಾರ್ ವೆಳ್ಳಾಪಳ್ಳಿ, ಪಿ.ಕೆ ಕೃಷ್ಣದಾಸ್, ಕುಮ್ಮನಂ ರಾಜಶೇಖರನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ಅರೆಯಕಂಡಿ ಸಂತೋಷ್, ಜೇಕಬ್ ಪೀಟರ್, ವಿ.ವಿ ರಾಜೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
ಸಮನ್ವಿತಾ ಗಣೇಶ್ ಪ್ರಾರ್ಥನೆ ಹಾಡಿದರು. ರಾಜ್ಯ ಸಮಿತಿ ಸದಸ್ಯ ಪಿ. ಸುರೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.