ಇಡುಕ್ಕಿ: ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪೋಲೀಸರಿಗೆ ದೂರು ನೀಡಿದೆ.
ಇಡುಕ್ಕಿ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ದೂರು ನೀಡಲಾಗಿದೆ. ಸಾಂವಿಧಾನಿಕ ವ್ಯಕ್ತಿಗೆ ಅವಮಾನ ಮಾಡಿದ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ನಿನ್ನೆ ಇಡುಕ್ಕಿಗೆ ಭೇಟಿ ನೀಡಿದ್ದರು. ಈ ವೇಳೆ ಎಸ್‍ಎಫ್‍ಐ-ಡಿವೈಎಫ್‍ಐ ಕಾರ್ಯಕರ್ತರು ಅವಾಚ್ಯ ಶಬ್ಧಗಳನ್ನು ಕೂಗಿದರು. ಬಿಜೆಪಿ ಕೇಂದ್ರ ವಲಯ ಅಧ್ಯಕ್ಷ ಎನ್.ಹರಿ ಪೋಲೀಸರಿಗೆ ದೂರು ನೀಡಿದ್ದಾರೆ. ತೊಡುಪುಳದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲರು ಜಿಲ್ಲೆಗೆ ಬಂದಿದ್ದರು.
ವಿಧಾನಸಭೆ ಅಂಗೀಕರಿಸಿದ ಭೂ ಕಾನೂನು ತಿದ್ದುಪಡಿ ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಎಲ್‍ಡಿಎಫ್ ಇಡುಕ್ಕಿ ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿತ್ತು. ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.