ಕುಂಬಳೆ: ಮಾಯ್ಪಾಡಿಯ ಡಯಟ್ ವಿದ್ಯಾಸಂಸ್ಥೆಯ ಟಿಟಿಸಿ ವಿದ್ಯಾರ್ಥಿಗಳಿಗೆ ರಂಗಚಿನ್ನಾರಿಯ ಸಂಗೀತ ಘಟಕ ಸ್ವರಚಿನ್ನಾರಿಯು ಏರ್ಪಡಿಸಿದ ಒಂದು ದಿನದ ಕನ್ನಡ ನಾಡಗೀತೆ -ಭಾವಗೀತೆಗಳ ಕಲಿಕಾ ಶಿಬಿರ “ಕನ್ನಡ ಧ್ವನಿ” ಜ.6 ರಂದು ಯಶಸ್ವಿಯಾಗಿ ನಡೆಯಿತು.
ಡಯಟ್ ಮಾಯ್ಪಾಡಿಯ ಪ್ರಾoಶುಪಾಲ ಡಾ ಕೆ ರಘುರಾಮ್ ಭಟ್ ಸಮಾರಂಭ ಉಧ್ಘಾಟಿಸಿ ಮಾತನಾಡಿ, ಕಾಸರಗೋಡಿನ ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಗೌರವಿಸಿ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯ ಎಂದರು. ರಂಗಚಿನ್ನಾರಿಯು ಈ ಕೆಲಸವನ್ನು ಮಾಡುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಮುಂದೆಯೂ ವಿವಿಧ ಕನ್ನಡ ಕಾರ್ಯಕ್ರಮಗಳಿಗೆ ಸಂಸ್ಥೆಯಿಂದ ಮುಕ್ತ ಬೆಂಬಲ ಸೂಚಿಸಿದರು.
ರಂಗಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಕೆ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಚಿನ್ನಾರಿಯ ಹುಟ್ಟಿನ ಉದ್ದೇಶ ಹಾಗೂ ಇದುವರೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಶ್ರಮವನ್ನು ನೆನಪಿಸುತ್ತಾ ವಿದ್ಯಾರ್ಥಿಗಳಿಗೆ ಭಾಷಾಭಿಮಾನ ಮತ್ತು ವಿದ್ಯೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವ ಕಿವಿಮಾತು ಹೇಳಿದರು. ಸ್ವರಚಿನ್ನಾರಿಯ ಅಧ್ಯಕ್ಷ ಪುರುμÉೂೀತ್ತಮ್ ಕೊಪ್ಪಲ್ ಸ್ವಾಗತಿಸಿ, ರಂಗಚಿನ್ನಾರಿ ನಿರ್ದೇಶಕ, ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯನ್ನು ನಿರ್ವಹಿಸಿ ವಂದಿಸಿದರು. ಡಯಟ್ ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ರಂಗಚಿನ್ನಾರಿ ನಿರ್ದೇಶಕ ಸತ್ಯನಾರಾಯಣ ಕೆ, ಶಿಬಿರ ನಿರ್ದೇಶಕ, ಗಾಯಕ ಕಿಶೋರ್ ಪೆರ್ಲ ಹಾಗೂ ಪ್ರತಿಜ್ಞಾ ರಂಜಿತ್ ಉಪಸ್ಥಿತರಿದ್ದರು. ಸಭೆಯ ನಂತರ ಸುಮಾರು 44 ವಿದ್ಯಾರ್ಥಿಗಳಿಗೆ ಕನ್ನಡ ನಾಡಗೀತೆ ಹಾಗೂ ಒಂದು ಕನ್ನಡ ಭಾವಗೀತೆಯನ್ನು ಕರೋಕೆ ಜೊತೆ ಹಾಡುವುದನ್ನು ಕಿಶೋರ್ ಪೆರ್ಲ ಮತ್ತು ಪ್ರತಿಜ್ಞಾ ರಂಜಿತ್ ತರಬೇತಿ ನೀಡಿದರು. ತುಳು ಸಂಶೋಧಕ ಸಾಹಿತಿ ಅಮೃತಸೋಮೇಶ್ವರ ಅವರ ನಿಧನಕ್ಕೆ ರಂಗಚಿನ್ನಾರಿ ನಾರಿಚಿನ್ನಾರಿ ಹಾಗೂ ಸ್ವರಚಿನ್ನಾರಿ ಪರವಾಗಿ ಮೌನ ಪ್ರಾರ್ಥನೆಯ ಮೂಲಕ ಸಂತಾಪ ವ್ಯಕ್ತಪಡಿಸಲಾಯಿತು. ಸ್ವರಚಿನ್ನಾರಿಯ ಸಕ್ರಿಯ ಸದಸ್ಯೆ ಬಬಿತಾ ಆಚಾರ್ಯ ಮತ್ತು ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದರು. ಶಿಬಿರದ ಕೊನೆಗೆ ವಿದ್ಯಾರ್ಥಿಗಳು ತಮ್ಮ ಅನುಭವ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.