ಠಾಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ, ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಭಿವಂಡಿಯ ನ್ಯಾಯಾಲಯವು ಮಾರ್ಚ್ 16ಕ್ಕೆ ಮುಂದೂಡಿ ಶನಿವಾರ ಆದೇಶಿಸಿದೆ.
ಠಾಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ, ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಭಿವಂಡಿಯ ನ್ಯಾಯಾಲಯವು ಮಾರ್ಚ್ 16ಕ್ಕೆ ಮುಂದೂಡಿ ಶನಿವಾರ ಆದೇಶಿಸಿದೆ.
'ಭಾರತ್ ಜೋಡೊ ನ್ಯಾಯ ಯಾತ್ರೆ'ಯಲ್ಲಿ ಭಾಗಿಯಾಗಿರುವುದರಿಂದ ವಿಚಾರಣೆಯನ್ನು ಮುಂದೂಡುವಂತೆ ರಾಹುಲ್ ಗಾಂಧಿ ಕೋರಿದ್ದರು.
'ಈ ಅರ್ಜಿ ಸ್ವೀಕರಿಸಿದ ಮ್ಯಾಜಿಸ್ಟ್ರೇಟ್ ಎಲ್.ಸಿ. ವಾಡಿಕರ್ ವಿಚಾರಣೆಯನ್ನು ಮುಂದೂಡಿದರು' ಎಂದು ರಾಹುಲ್ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ತಿಳಿಸಿದ್ದಾರೆ.
'ಭಿವಾಂಡಿಯಲ್ಲಿ 2014ರ ಮಾರ್ಚ್ 6ರಂದು ನಡೆದಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಆರ್‌ಎಸ್‌ಎಸ್‌ನವರು ಮಹಾತ್ಮ ಗಾಂಧಿಯನ್ನು ಕೊಂದವರು' ಎಂದಿದ್ದರು. ರಾಹುಲ್ ಅವರ ಈ ಹೇಳಿಕೆ ಆರ್‌ಎಸ್‌ಎಸ್ ಗೌರವಕ್ಕೆ ಧಕ್ಕೆ ತಂದಿದೆ ಎಂದು ದೂರಿ, ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.