ಕಾಸರಗೋಡು: ಎಸ್‍ಎಫ್‍ಐ ಮಾಜಿ ನೇತಾರೆ ಕೆ. ವಿದ್ಯಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ನೀಲೇಶ್ವರ ಪೋಲೀಸರು ಹೊಸದುರ್ಗ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿದ್ಯಾ ಅವರನ್ನು ಮಾತ್ರ ಆರೋಪಿಯನ್ನಾಗಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅತಿಥಿ ಶಿಕ್ಷಕರ ನೇಮಕಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ವಿದ್ಯಾ, ಕರಿಂದಳ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕಿಯಾಗಲು ನಕಲಿ ಕೆಲಸದ ಅನುಭವ ಪ್ರಮಾಣ ಪತ್ರ ಬಳಸಿ ಕೆಲಸ ಮಾಡುತ್ತಿದ್ದಳು. ಈ ಪ್ರಕರಣದಲ್ಲಿ ಇದೀಗ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ವಿದ್ಯಾ ಏಕೈಕ ಆರೋಪಿಯಾಗಿದ್ದು, ನಕಲಿ ದಾಖಲೆ ಸೃಷ್ಟಿಸಲು ಆಕೆ ಬೇರೆ ಯಾರಿಂದಲೂ ಸಹಾಯ ಪಡೆದಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ವಿದ್ಯಾ ವಿರುದ್ಧ ಪೋರ್ಜರಿ, ನಕಲಿ ದಾಖಲೆ ಸಲ್ಲಿಕೆ, ವಂಚನೆ ಹಾಗೂ ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ. ಚಾರ್ಜ್ ಶೀಟ್ ಪ್ರಕಾರ ಮೊಬೈಲ್ ಪೋನ್ ಬಳಸಿ ನಕಲಿ ಪ್ರಮಾಣಪತ್ರ ತಯಾರಿಸಲಾಗಿದ್ದು, ಇದರೊಂದಿಗೆ ಸರ್ಕಾರ ಸಂಬಳ ಪಡೆದಿದ್ದಳು.