ಬದಿಯಡ್ಕ: ಅಯೋಧ್ಯೆಯ ಶ್ರೀರಾಮಪ್ರತಿಷ್ಠಾ ಕಾರ್ಯಕ್ರಮದಂಗವಾಗಿ ಪೆರಡಾಲ ಶ್ರೀಉದನೇಶ್ವರ ದೇವಾಲಯದಲ್ಲಿ ಸಂಭ್ರಮಾಚರಣೆ ನಡೆಯಿತು.
ಸಂಜೆ 4ರಿಂದ ಶ್ರೀ ಶಿವ ಶಕ್ತಿ ಪೆರಡಾಲ ಇವರ ಆಶ್ರಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಯಕ್ಷಗಾನ ಗಾನ ವೈಭವ, ಭಜನೆ, ರಾಮ ಜಪ, ವಸಂತ ಪೂಜೆ ಮತ್ತು ವಿಶೇಷ ದೀಪೋತ್ಸವ ವಿಜೃಂಭಣೆಯಿಂದ ಜರಗಿತು. ದೀಪೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತರು ಭಾಗವಹಿಸಿದ್ದರು.