ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕಾಸರಗೋಡು ನುಳ್ಳಿಪಾಡಿಯಲ್ಲಿ ಅಂಡರ್ ಪಾಸ್‍ಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಸರಗೋಡು ನಗರಸಭೆಯ 7, 8, 9, 17 ಮತ್ತು 18ನೇ ವಾರ್ಡ್‍ನ ನಾಗರಿಕರು ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನುಳ್ಳಿಪಾಡಿಯಲ್ಲಿ ಧರಣಿ ನಡೆಸಿದರು.
ಧರಣಿಯನ್ನು ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ. ರಮೇಶ್ ಉದ್ಘಾಟಿಸಿದರು. ಕ್ರಿಯಾ ಸಮಿತಿ ಸಂಚಾಲಕಿ ನಗರಸಭಾ ಕೌನ್ಸಿಲರ್ ನಗರಸಭಾ ಸದಸ್ಯೆ ಎಂ.ಲಲಿತಾ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯರಾದ ಶಾರದಾ, ವಿಮಲಾ ಶ್ರೀಧರ, ವರಪ್ರಸಾದ್ ಕೋಟೆಕಣಿ ಡಾ,ಅಫ್ಜಲ್, ಹಾರಿಸ್ ನುಳ್ಳಿಪ್ಪಾಡಿ, ಬಿ. ಎಂ. ಎಸ್ ಜಿಲ್ಲಾಧ್ಯಕ್ಷ ಕೆ. ಉಪೇಂದ್ರ, ಹೈಯರ್ ಗೂಡ್ಸ್ ಮಾಲಕರ ಜಿಲ್ಲಾಧ್ಯಕ್ಷ ಸುರೇಂದ್ರನ್ ಬಿಂದು, ನುಲ್ಲಿಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಟ್ರಸ್ಟಿಗಳು, ನುಲ್ಲಿಪಾಡಿ ಮೊಹಿಯುದ್ದೀನ್ ಮಸೀದಿ ಸಮಿತಿ ಪದಾಧಿಕಾರಿಗಳು, ತಳಂಗರ ಕ್ಲಸ್ಟರ್, ನೇತಾಜಿ ರೆಸಿಡೆನ್ಸಿ, ಸುರಭಿ ರೆಸಿಡೆನ್ಸಿ ಪದಾಧಿಕಾರಿಗಳಾದ ಡಾ, ಜಯದೇವ ಕಂಗಿಲ, ಡಾ, ನಾಗರಾಜ ಭಟ್, ಟಿ. ಪಿ ಇಲ್ಯಾಸ್, ಕೋಟೆಕಣಿ ಫ್ರೆಂಡ್ಸ್ ನ ಹರೀಶ್, ಸಿಪಿಐ ಮುಖಂಡ ಬಿಜು ಉಣ್ಣಿತ್ತಾನ್, ಚೆನ್ನಿಕರ ಕಲಾ ಮತ್ತು ಕ್ರೀಡೆಯ ಪ್ರತಿನಿಧಿ ವಿನೋದಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಕ್ರಿಯಾ ಸಮಿತಿ ಸಂಚಾಲಕ ಅನಿಲ್ ಚೆನ್ನಿಕರ ಸ್ವಾಗತಿಸಿದರು.
ಅತ್ಯಂತ ಜನದಟ್ಟಣೆಯ ಹಾಗೂ ಧಾರ್ಮಿಕ ಕ್ಷೇತ್ರ, ಆಸ್ಪತ್ರೆ ಸೇರಿದಂತೆ ಪ್ರಮುಖ ಕೇಂದ್ರಗಳನ್ನು ಹೊಂದಿರುವ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ಸೌಲಭ್ಯ ಕಲ್ಪಿಸಲ್ಲಿ ಹೆದ್ದಾರಿ ಪ್ರಾಧಿಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.