ಕಾಸರಗೋಡು: ಸರ್ಕಾರಿ ನೌಕರರ ಪ್ರಮುಖ ಆರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಸ್‍ಇಟಿಒ (ಸೆಟೋ) ನಡೆಸುತ್ತಿರುವ ಮುಷ್ಕರದ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಶೇಖರನ್ ಅವರಿಗೆ ಮುಷ್ಕರದ ನೋಟೀಸ್ ನೀಡಿದರು.
ಸೆಟೋ ಜಿಲ್ಲಾ ಅಧ್ಯಕ್ಷ ಕೆ.ಎಂ.ಜಯಪ್ರಕಾಶ್, ಸಂಚಾಲಕ ಕೆ.ಶ್ರೀನಿವಾಸನ್, ನೇತಾರರಾದ ಎಂ.ಶ್ರೀನಿವಾಸನ್, ವತ್ಸಲ ಕೃಷ್ಣ ಎಂ.ಟಿ, ಪ್ರಸೀತಾ ವಿ.ಟಿ, ಪಿ.ರಾಜೇಶ್, ವಿ.ಎಂ.ರಾಜೇಶ್, ಎಸ್.ಎಂ.ರಜನಿ, ಗಿರೀಶ್ ಆನಪೆಟ್ಟಿ, ರತೀಶ್ ಬಂದಡ್ಕ, ಜಯರಾಜ್ ಪೆರಿಯ, ಪ್ರತೀಶ್ ಬಾಬು, ವಿ.ಕೆ.ಬಾಲಕೃಷ್ಣನ್, ಸಫೀನ ಮೊದಲಾದವರು ನೇತೃತ್ವ ನೀಡಿದರು.