ಕಾಸರಗೋಡು: ಕೃತಕ ಗರ್ಭಧಾರಣಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಡ್ರೀಮ್ ಫ್ಲವರ್ ಐವಿಎಫ್ ಸೆಂಟರ್ ಕಾಸರಗೋಡು ತಮ್ಮ ಹನ್ನೆರಡನೇ ವಾರ್ಷಿಕೋತ್ಸವ ಮತ್ತು ಐವಿಎಫ್ ಮೂಲಕ 6000 ನೇ ಮಗುವಿನ ಜನನದ ಸಂಭ್ರಮೋಲ್ಲಾಸ ಕಾರ್ಯಕ್ರಮವನ್ನು 'ಡ್ರೀಮ್ ಫೆಸ್ಟ್ 2 ಕೆ 24'ಹೆಸರಲ್ಲಿ ಕಾಸರಗೋಡು ನಗರಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಸುರೇಂದ್ರ ಕೆ. ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಡ್ರೀಮ್ ಫ್ಲವರ್ ಐವಿಎಫ್ ಸೆಂಟರ್‍ನ ಸೇವಾ ಫಲಾನುಭವಿಗಳು, ಆಹ್ವಾನಿತ ಅತಿಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಐಎಂಎ ಅಧ್ಯಕ್ಷ ಡಾ.ಜೋಸೆಫ್ ಬೆನ್ನವನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರದ ನಿರ್ದೇಶಕರಾದ ಡಾ.ಕೆ. ಪಿ ಸೂರಜ್, ಡಾ ಜಯಲಕ್ಷ್ಮಿ ಸೂರಜ್, ಐಎಂಎ ಕಾಸರಗೋಡು ಶಾಖೆಯ ಉಪಾಧ್ಯಕ್ಷ ಡಾ ಹರಿಕಿರಣ್ ಬಂಗೇರ, ಮಾಜಿ ಹೆಚ್ಚುವರಿ ಜಿಲ್ಲಾ ಪ್ಲೀಡರ್ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಕೆ. ಬಾಲಕೃಷ್ಣನ್ ಮತ್ತು ಡ್ರೀಮ್ ಫ್ಲವರ್ ಐವಿಎಫ್ ಮುಖ್ಯ ಭ್ರೂಣಶಾಸ್ತ್ರಜ್ಞ ಡಾ.ಎಲಿಜಬೆತ್ ಮ್ಯಾಥ್ಯೂ ಭಾಗವಹಿಸಲಿದ್ದಾರೆ. ಮಕ್ಕಳು ಮತ್ತು ಸಿಬ್ಬಂದಿ ವರ್ಗದವರಿಂದ ವಿವಿಧ ಕಲಾಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಅಫ್ಜಲ್ ಬಶೀರ್ ಮತ್ತು ಐವಿಎಫ್ ಕೌನ್ಸಿಲರ್ ಗೀನಾ ಜಾರ್ಜ್ ಉಪಸ್ಥಿತರಿದ್ದರು.