ಕಾಸರಗೋಡು: ಲಾರಿ ಮತ್ತು ಪಿಕಪ್ ವ್ಯಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟ ಘಟನೆ ಕುತ್ತಿಕೋಲ್ ಕಳಕ್ಕರ ಎಂಬಲ್ಲಿ ನಡೆದಿದೆ. ಕೊಳವೆ ಬಾವಿ ನಿರ್ಮಾಣಕ್ಕೆ ಬಳಸುತ್ತಿದ್ದ ಲಾರಿ ಮೀನು ಮಾರಾಟಕ್ಕೆ ಬಳಸುತ್ತಿದ್ದ ಪಿಕಪ್ ವ್ಯಾನ್‍ಗೆ ಡಿಕ್ಕಿ ಹೊಡೆದಿದೆ.
ಕೋಟೋಡಿ ಮೂಲದ ಜಿಜೋ ಜೋಸೆಫ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಟ್ಟಿಕೋಲ್ ಕಡೆಗೆ ಹೋಗುತ್ತಿದ್ದ ಪಿಕಪ್ ವ್ಯಾನ್ ಚುಳ್ಳಿಕ್ಕರ ಕಡೆಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿದ್ದ ಇತರ ನಾಲ್ವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.