ಅಲ್ಲದೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉನ್ನತ ರಾಜಕೀಯ ನಾಯಕರು ಭಾಗವಹಿಸದಂತೆ ತಡೆಯುವಂತೆ ಆತ ಕರೆ ನೀಡಿದ್ದಾನೆ.
ಈ ಕುರಿತು ಕೆಲ ಪತ್ರಕರ್ತರಿಗೆ ಪನ್ನೂ ಇ-ಮೇಲ್ ಮಾಡಿದ್ದಾನೆ. ಆತ ಕಳುಹಿಸಿರುವ ಎರಡು ವಿಡಿಯೊಗಳು ಪಿಟಿಐಗೆ ದೊರೆತಿದ್ದು, ಅದರಲ್ಲಿ ಆತನು 1995ರ ಆಗಸ್ಟ್ 31ರಂದು ಬಾಂಬ್ ಸ್ಫೋಟದಲ್ಲಿ ಹತ್ಯೆಯಾದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರಿಗೆ ಮಾನ್ ಅವರನ್ನು ಹೋಲಿಸಿದ್ದಾನೆ. ಆ ಸ್ಫೋಟದಲ್ಲಿ 17 ಜನರು ಮೃತಪಟ್ಟಿದ್ದರು. ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನ್ ಅದರ ಹೊಣೆ ಹೊತ್ತಿತ್ತು.
ಅಲ್ಲದೆ, ಆತನು 1990ರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಗೋವಿಂದ್ ರಾಮ್ ಅವರಿಗೆ, ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಯಾದವ್ ಅವರನ್ನು ಸಮೀಕರಿಸಿದ್ದಾನೆ.
ಪನ್ನೂ ಮತ್ತು ಆತನ ಸಂಘಟನೆಯು ಈ ಹಿಂದೆಯೂ ಜೀವ ಬೆದರಿಕೆಗಳನ್ನು ಹಾಕಿದೆ ಎಂದಿರುವ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರಾಜ್ಯದ ಎಲ್ಲ ವಿಐಪಿಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
'ಪ್ರಧಾನಿ ಮೋದಿ ಅವರಿಗೆ ಧೈರ್ಯವಿದ್ದರೆ ಅವರು, ಯಾವುದೇ ಭದ್ರತೆಯಿಲ್ಲದೆ
ಗಣರಾಜ್ಯೋತ್ಸವ ಪರೇಡ್‌ಗೆ ಹಾಜರಾಗಲಿ' ಎಂದು ವಿಡಿಯೊವೊಂದರಲ್ಲಿ ಹೇಳಿರುವ ಆತ, 'ಎಸ್‌ಎಫ್‌ಜೆಯು ಖಾಲಿಸ್ತಾನ ಧ್ವಜವನ್ನು ಹಾರಿಸುವ ಮೂಲಕ ನಿಜ್ಜರ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹೊರಟಿದೆ' ಎಂದಿದ್ದಾನೆ. ಕೆನಡಾದ ಗುರುದ್ವಾರದ ಬಳಿ ನಿಜ್ಜರ್‌ನನ್ನು ಅಪರಿಚಿತ ದುಷ್ಕರ್ಮಿಗಳು ಕೊಂದಿದ್ದರು.
ಮತ್ತೊಂದು ವಿಡಿಯೊದಲ್ಲಿ ಪನ್ನೂ, ಪಂಜಾಬ್‌ನ ಗ್ಯಾಂಗ್‌ಸ್ಟರ್
ಗಳಿಗೆ ಎಸ್‌ಎಫ್‌ಜೆಗೆ ಸೇರುವಂತೆ ಆಹ್ವಾನ ನೀಡಿದ್ದಾನೆ. ಈ ಮೂಲಕ ಅವರು ಖಾಲಿಸ್ತಾನಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಬೇಕು ಎಂದಿದ್ದಾನೆ. ಮುಂದುವರಿದು, ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸದಂತೆ ಮುಖ್ಯಮಂತ್ರಿ ಮಾನ್ ಅವರನ್ನು ತಡೆಯುವಂತೆಯೂ ಆತ ಕರೆ ನೀಡಿದ್ದಾನೆ.