HEALTH TIPS

ನೀರ್ಮಜೆ ಪುಂಡೂರು ಮನೆಯಂಗಳದಲ್ಲಿ ಪುಣಿಂಚಿತ್ತಾಯ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಕೃತಿಬಿಡುಗಡೆ

            ಮುಳ್ಳೇರಿಯ: ಕಲೆ, ಸಾಹಿತ್ಯ,ಸಂಸ್ಕøತಿಗೆ ಮಹೋನ್ನತ ಕೊಡುಗೆಯಿತ್ತು ಅಮರರಾದ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರತಿಷ್ಠಾನದ ನೇತೃತ್ವದಲ್ಲಿ  ಸಾಹಿತ್ಯ, ಕಲೋಪಾಸಕ  ಕೀರ್ತಿಶೇಷ ರಾಮಚಂದ್ರ ಪುಣಿಂಚಿತ್ತಾಯರ ಪ್ರಥಮ ಸಂಸ್ಮರಣೆಯೊಂದಿಗೆ ನಾಡಿನ ಹಿರಿಯ ಕವಿ, ಕಲಾಸಾಹಿತ್ಯ ಚಿಂತಕ,  ಅರ್ಥದಾರಿ ಡಾ.ರಮಾನಂದ ಬನಾರಿ ಅವರಿಗೆ ದಂಪತಿ ಸಹಿತ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

           ಪುಂಡೂರು ನೀರ್ಮಜೆಯ "ಶ್ರೀ ರಂಜಿನಿ" ಮನೆಯಂಗಳದಲ್ಲಿ ನಡೆದ ಸಮಾರಂಭವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ, ದಿ.ರಾಮಚಂದ್ರ ಪುಣಿಂಚಿತ್ತಾಯರು ರಚಿಸಿದ "ಭಕ್ತಿ ಭಾವ ಯಾನ"  ಎಂಬ ಭಕ್ತಿಗೀತೆಗಳ ಕೃತಿ ಬಿಡುಗಡೆಗೈದು ಆಶೀರ್ವಚನವಿತ್ತರು.  ತಂತ್ರಿ ಉಳಿಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು. ನೂತನ ಕೃತಿಗೆ ಮುನ್ನುಡಿ ಬರೆದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಕೃತಿ ಪರಿಚಯ ಮಾಡಿದರು. ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅತಿಥಿಯಾಗಿ ಶುಭಾಶಂಸನೆಗೈದು ಪುಂಡೂರು ಮನೆತನದ ಕಲಾ,ಸಾಹಿತ್ಯ, ಸಾಂಸ್ಕೃತಿಕ ಕೊಡುಗೆಯಲ್ಲಿ ಗಡಿನಾಡಿನ ಇತಿಹಾಸವೇ ಹುದುಗಿದೆ. ಅದರ ಅಧ್ಯಯನ ನಡೆಯಬೇಕೆಂದರು. ಇದೇ ಸಂದರ್ಭದಲ್ಲಿ ಪ್ರತಿμÁ್ಠನದ ಹಿರಿಯ ಸದಸ್ಯ ಶ್ರೀಪತಿ. ಟಿ ಅವರನ್ನು ಗೌರವಿಸಲಾಯಿತು. ಪ್ರತಿμÁ್ಠನದ ಅಧ್ಯಕ್ಷ ಪುರುμÉೂೀತ್ತಮ ಪುಣಿಂಚಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಂಜನ್ ಪುಣಿಂಚಿತ್ತಾಯ ಸನ್ಮಾನ ಪತ್ರ ವಾಚಿಸಿದರು.  ಸತ್ಯಮೂರ್ತಿ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಲತಾ ಅಮ್ಮಣ್ಣಾಯ, ಸೌಮ್ಯ ಸರಸ್ವತಿ ಪ್ರಾರ್ಥನೆ ಹಾಡಿದರು. ವಾಮದೇವ ಪುಣಿಂಚಿತ್ತಾಯ ವಂದಿಸಿದರು.


            ಸ್ಮರಣೀಯ ತಾಳಮದ್ದಳೆ

            ಸಂಸ್ಮರಣೆಯ ಅಂಗವಾಗಿ ಹಿರಿಯ ಕಲಾವಿದರು ಪಾಲ್ಗೊಂಡ "ಕರ್ಮಬಂಧ" ತಾಳಮದ್ದಳೆ ಸ್ಮರಣೀಯವಾಯಿತು. ಅರ್ಥಗಾರಿಕೆಯಲ್ಲಿ ಡಾ.ಎಂ.ಪ್ರಭಾಕರ ಜೋಷಿ, ಡಾ. ರಮಾನಂದ ಬನಾರಿ, ಶ್ರೀಕರ ಭಟ್ ಮರಾಠೆ ಭಾಗವಹಿಸಿ ಮಾತಿನ ಮಂಟಪ ಕಟ್ಟಿದರು. ದಿನೇಶ ಅಮ್ಮಣ್ಣಾಯರ ಮನೋಜ್ಞ ಭಾಗವತಿಕೆಯಲ್ಲಿ ನಡೆದ ಕೂಟದ ಹಿಮ್ಮೇಳದಲ್ಲಿ ಲಕ್ಷೀಶ ಅಮ್ಮಣ್ಣಾಯ, ಅಡೂರು ಮೋಹನ ಸರಳಾಯ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries