ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 19ನೇ ವರ್ಷದ ಶಾಲಾ ವಾರ್ಷಿಕೋತ್ಸವವು ಶಾಲಾ ಸಂಸ್ಥಾಪಕ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಶನಿವಾರ ಜರಗಿತು. ಪೂಜ್ಯ ಶ್ರೀಗಳು ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡಿ ಶಾಲಾವಿದ್ಯಾರ್ಥಿಗಳು ಉತ್ತಮ ಸಂಸ್ಕಾರಕ್ಕಾಗಿ, ಪಠ್ಯದ ಜೊತೆ ವೀರ, ಮಹಾಪುರುಷರ ಜೀವನ ಚರಿತ್ರೆಯ ಪುಸ್ತಕ ಓದಿ ದೇಶಭಕ್ತ ಪ್ರಜೆಗಳಾಗಿ ಬಾಳಿ ಬದುಕಬೇಕು ಎಂದು ಆಶೀರ್ವದಿಸಿದರು.
ಈಲ್ಲಾ ಶಿಕ್ಷಣಾಧಿಕಾರಿ ದಿನೇಶನ್. ವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಆಡಳಿತಾಧಿಕಾರಿ ಕಮಲಾಕ್ಷ ಅವರು ಶಾಲಾ ಚಟುವಟಿಕೆಗಳ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಣಚ್ಚೂರ್ ಮೆಡಿಕಲ್ ಕಾಲೇಜಿನ ಉಪನ್ಯಾಸಕÀ ಡಾ.ಅಶೋಕ್ ಪದಕಣ್ಣಾಯ ಹಾಗೂ ಯುನೈಟೆಡ್ ಆಸ್ಪತ್ರೆ ಕಾಸರಗೋಡಿನ ಡಾ.ಮಂಜುನಾಥ ಶೆಟ್ಟಿ ಎಂ ಎಸ್ ಶುಭಹಾರೈಸಿದರು.
ಶಾಲೆಯಲ್ಲಿ ಉತ್ತಮ ಕಲಿಕೆಗಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ಕ್ಷಮಳಿಗೆ "ನಿತ್ಯಾನಂದ’’ ಪುರಸ್ಕಾರವನ್ನು , ಶ್ರಾವಣ್ಯ ಕೆ., ಇವಳ ಕಲಾಕ್ಷೇತ್ರದ ಸಾಧನೆಗಾಗಿ "ಜೀಜಾಬಾಯಿ" ಪುರಸ್ಕಾರ ಮತ್ತು ಎಂಟನೇ ತರಗತಿಯ ಲಲಿತ್ ಚಂದ್ರ ನ ಕ್ರೀಡಾ ಸಾಧನೆಗಾಗಿ "ಏಕಲವ್ಯ" ಪುರಸ್ಕಾರವನ್ನು ಶ್ರೀಗಳವರು ನೀಡಿ ಶುಭಹಾರೈಸಿದರು.
2023 - 24 ನೇ ಸಾಲಿನ ಸಿ ಬಿ ಎಸ್ ಇ ಶಾಲೆಗಳ ಕೇರಳ ರಾಜ್ಯಮಟ್ಟದ ಕಲೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರಾವಣ್ಯ ಕೆ. ಅಭಿರಾಮಿ ಎ ಕೆ., ದುರ್ಗಾದತ್ತ, ಲಲಿತ್ ಚಂದ್ರ ಹಾಗೂ ಅನಿಕ ಸುನಿ ಬಟ್ಯ ಇವರನ್ನು ಅಭಿನಂದಿಸಲಾಯಿತು. ಶಾಲೆಯಲ್ಲಿ ಹಲವು ವರ್ಷಗಳಿಂದ ಸಂಸ್ಕøತ ಅಧ್ಯಾಪಕರಾಗಿ ಸೇವೆಸಲ್ಲಿಸಿ ಇದೀಗ ಕೇಂದ್ರೀಯ ವಿದ್ಯಾಲಯದಲ್ಲಿ ನಿಯುಕ್ತರಾದ ಸುಬ್ರಹ್ಮಣ್ಯ ಭಟ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿದ ವಾರ್ಷಿಕೋತ್ಸವದಲ್ಲಿ ಶಾಲಾ ಪ್ರಾಂಶುಪಾಲ ಪ್ರವಿದ್ ಸ್ವಾಗತಿಸಿ, ಶಿಕ್ಷಕಿ ರೇಖಾ ಪ್ರದೀಪ್ ವಂದಿಸಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು. ಶಾಲಾ ಆಡಳಿತ ಸಮಿತಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.