ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗಿರುವ ನೀರಿನ ತೊಟ್ಟಿ (ವಜೂಖಾನಾ) ಶುಚಿಗೊಳಿಸಲು ಸುಪ್ರೀಂ ಕೋರ್ಟ್, ಮಂಗಳವಾರ ಅನುಮತಿ ನೀಡಿದೆ.
ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗಿರುವ ನೀರಿನ ತೊಟ್ಟಿ (ವಜೂಖಾನಾ) ಶುಚಿಗೊಳಿಸಲು ಸುಪ್ರೀಂ ಕೋರ್ಟ್, ಮಂಗಳವಾರ ಅನುಮತಿ ನೀಡಿದೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ವಜೂಖಾನಾದಲ್ಲಿ ಕೆಲವೊಂದು ಮೀನುಗಳ ಸತ್ತಿದ್ದು, ಅದನ್ನು ಶುಚಿಗೊಳಿಸಲು ಅವಕಾಶ ನೀಡಬೇಕು ಎಂದು ಹಿಂದೂ ಪರ ಅರ್ಜಿದಾರರು ಸುಪ್ರೀಂ ಕೋರ್ಟ್ ಅನ್ನು ಕೋರಿದ್ದರು.
ಆದರೆ ಇದಕ್ಕೆ ಮುಸ್ಲಿಂ ಪರ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ವಜೂ ಖಾನಾ ಶುಚಿಗೊಳಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಮೇಲುಸ್ತುವಾರಿಯಲ್ಲಿ ನೀರಿನ ತೊಟ್ಟಿ ಶುಚಿಗಳಿಸಲು ಆದೇಶಿಸಿತು.
ಇದಕ್ಕೂ ಮೊದಲು ನ್ಯಾಯಪೀಠದ ಎದುರು ವಾದ ಮಂಡಿಸಿದ ಉತ್ತರ ಪ್ರದೇಶ ಸರ್ಕಾರದ ಸಹ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, 'ತೊಟ್ಟಿಯಲ್ಲಿ ಮೀನುಗಳು ಸತ್ತಿವೆ. ಅದನ್ನು ಶುಚಿಗೊಳಿಸಲು ಅನುಮತಿ ನೀಡಬೇಕು' ಎಂದು ಕೋರಿದ್ದರು.