ಇಂಫಾಲ್: ಮಣಿಪುರದಲ್ಲಿ ಮಂಗಳವಾರ ಮತ್ತೆ ಹಿಂಸಾಚಾರ ನಡೆದಿದೆ. ಬಂಡುಕೋರರು ಮತ್ತು ಗ್ರಾಮಸ್ಥರ ನಡುವಿನ ಗುಂಡಿನ ಕಾಳಗದಲ್ಲಿ ಗ್ರಾಮದ ಇಬ್ಬರು ಸ್ವಯಂ ಸೇವಕರು ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್: ಮಣಿಪುರದಲ್ಲಿ ಮಂಗಳವಾರ ಮತ್ತೆ ಹಿಂಸಾಚಾರ ನಡೆದಿದೆ. ಬಂಡುಕೋರರು ಮತ್ತು ಗ್ರಾಮಸ್ಥರ ನಡುವಿನ ಗುಂಡಿನ ಕಾಳಗದಲ್ಲಿ ಗ್ರಾಮದ ಇಬ್ಬರು ಸ್ವಯಂ ಸೇವಕರು ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಎನ್.ಮೈಕೆಲ್ (33) ಹಾಗೂ ಎಂ.ಖಾಬಾ(23) ಎಂದು ಗುರುತಿಸಲಾಗಿದೆ.
ಪಶ್ಚಿಮ ಇಂಫಾಲ್ ಮತ್ತು ಕಂಗ್‌ಪೋಕ್ಪಿ ಜಿಲ್ಲೆಯ ಗಡಿಯಲ್ಲಿರುವ ಕಡಂಗ್‌ಬಂದ್ ಗ್ರಾಮದಲ್ಲಿರುವ ಶಿಬಿರದಲ್ಲಿ ಈ ಘಟನೆ ನಡೆದಿದೆ.
'ಶಿಬಿರದ ಮೇಲೆ ಬಂಡುಕೋರರು ದಾಳಿ ನಡೆಸಿದರು. ಗ್ರಾಮಸ್ಥರು ಪ್ರತಿದಾಳಿ ಆರಂಭಿಸಿದ ವೇಳೆ ಗುಂಡಿನ ಕಾಳಗ ನಡೆದಿದೆ. ಆಗ, ಬಂಡುಕೋರರು ಮತ್ತಷ್ಟು ದಾಳಿಯನ್ನು ತೀವ್ರಗೊಳಿಸಿದರು' ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಕಾಳಗ ಆರಂಭಗೊಂಡ ಬೆನ್ನಲ್ಲೇ, ಭೀತರಾದ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದವರು ಗ್ರಾಮವನ್ನು ತೊರೆದು, ನೆರೆಯ ಗ್ರಾಮ ಕೌತ್ರುಕ್‌ನತ್ತ ಓಡಿ ಹೋದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದ್ದಾರೆ.