ಜೆರುಸಲೇಂ: ಸೇನೆಯು ಗಾಜಾ ಪಟ್ಟಿಯಲ್ಲಿ ಸೆರೆ ಹಿಡಿದು ಬಂಧಿಸಲಾಗಿದ್ದ ಪ್ಯಾಲೆಸ್ಟೀನ್ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಂಕಿತ ಯೋಧನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.
ಜೆರುಸಲೇಂ: ಸೇನೆಯು ಗಾಜಾ ಪಟ್ಟಿಯಲ್ಲಿ ಸೆರೆ ಹಿಡಿದು ಬಂಧಿಸಲಾಗಿದ್ದ ಪ್ಯಾಲೆಸ್ಟೀನ್ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಂಕಿತ ಯೋಧನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.
'ಉಗ್ರನೊಬ್ಬನನ್ನು ಯೋಧನ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು.
'ಗುಂಡು ಹಾರಿಸಿದ ಸನ್ನಿವೇಶದ ಕುರಿತು ಮಿಲಿಟರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್‌ನಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷ ಆರಂಭವಾದಾಗಿನಿಂದ ಪ್ಯಾಲಿಸ್ಟೀನ್‌ನ ನೂರಾರು ನಾಗರಿಕರನ್ನು ಸೆರೆಹಿಡಿಯಲಾಗಿದೆ.
ಪ್ಯಾಲೆಸ್ಟೀನ್‌ನ ಹತ್ತಕ್ಕೂ ಹೆಚ್ಚು ನಾಗರಿಕರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದ ತನಿಖೆಯಾಗಬೇಕು ಎಂದು ಹಮಾಸ್ ಕಳೆದ ತಿಂಗಳು ಆಗ್ರಹಿಸಿತ್ತು. ಆದರೆ, ಇಸ್ರೇಲ್ ಸೇನೆಯು, ಸಂಘರ್ಷದ ವೇಳೆ ಇದು ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿತ್ತು.
ಹಮಾಸ್ ಬಂಡುಕೋರರ ವಶದಲ್ಲಿದ್ದ ತನ್ನದೇ (ಇಸ್ರೇಲ್) ಪ್ರಜೆಗಳನ್ನೂ ಇಸ್ರೇಲ್ ಸೇನೆ ತಪ್ಪುಗ್ರಹಿಕೆಯಿಂದಾಗಿ ಹತ್ಯೆ ಮಾಡಿತ್ತು. ಈ ವೇಳೆ 18 ಮಂದಿ ಮೃತಪಟ್ಟಿದ್ದರು.