HEALTH TIPS

ನಾಳೆ ಮಕರ ಬೆಳಕು ದರ್ಶನ: ಸನ್ನಿಧಿಯಲ್ಲಿ ಸಿದ್ದತೆಗಳು ಅಂತಿಮ ಹಂತದಲ್ಲಿ

                   ಶಬರಿಮಲೆ: ಮಕರ ಬೆಳಕು ಉತ್ಸವಕ್ಕೆ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಸನ್ನಿಧಿ ಪೂರ್ತಿ ಭಾರೀ ಭಕ್ತಜನಸಂದಣಿ ಕಂಡುಬಂದಿದೆ. ಮಕರ ಬೆಳಕಿಗೂ ಮುನ್ನ ನಿನ್ನೆ ಸಂಜೆ ಪ್ರಾಸಾದ ಶುದ್ಧಿಕ್ರಿಯೆಗಳು ನಡೆದವು.

                       ಇಂದು ಉಷಃ ಪೂಜೆಯ ನಂತರ ಬಿಂಬ ಶುದ್ಧಿಕ್ರಿಯೆ ನಡೆಯಿತು. ನಾಳೆ ಬೆಳಗಿನ ಜಾವ ಎರಡು ಗಂಟೆಗೆ ಗರ್ಭಗೃಹ ತೆರೆಯಲಾಗುವುದು. 2. 46ಕ್ಕೆ ಮಕರಸಂಕ್ರಮ ಪೂಜೆ ಹಾಗೂ ತುಪ್ಪಾಭಿಷೇಕ ನಡೆಯಲಿದೆ.

                    ನಿತ್ಯದ ಪೂಜೆಗಳ ನಂತರ ಸಂಜೆ 5 ಗಂಟೆಗೆ ಮತ್ತೆ ತೆರೆಯಲಾಗುವುದು. ನಂತರ ಸಿಂಹಾಸನ ಸ್ವೀಕರಿಸಲು ಹೊರಡುವ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ತಿರುವಾಭರಣ(ಪವಿತ್ರ ಆಭರಣಗಳು) ಮೆರವಣಿಗೆಯನ್ನು ಸರಂಕುಇಯಲ್ಲಿ ಶಾಸ್ತ್ರೋಕ್ತವಾಗಿ ಬರಮಾಡಿಕೊಳ್ಳಲಾಗುವುದು. ಸಂಜೆ 6.15ಕ್ಕೆ ಧ್ವಜಸ್ತಂಭದ ಕೆಳಗೆ ತಿರುವಾಭರಣನ ಕಳಶವನ್ನು ಬರಮಾಡಿಕೊಳ್ಳಲಾಗುವುದು. ಸಂಜೆ 6.30 ಬಳಿಕ ಮಕರ ಬೆಳಕು ಹಾಗೂ ಮಕರಜ್ಯೋತಿ ದರ್ಶನ ನಡೆಯಲಿದೆ. 15ರಂದು ಸಂಜೆ ಮಣಿಮಂಟಪದಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. 15, 16, 17 ಮತ್ತು 18 ರಂದು ಅಯ್ಯಪ್ಪ ಸ್ವಾಮಿಯ ದರ್ಶನಬಲಿ ಮಣಿಮಂಟಪದಿಂದ ಹತ್ತನೇ ಮೆಟ್ಟಲಿನವರೆಗೆ ನಡೆಯಲಿದೆ. 18ರವರೆಗೆ ಭಕ್ತರು ತಿರುವಾಭರಣ ಭೂಷಿತನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬಹುದು.

                     19 ರವರೆಗೆ ಮಾತ್ರ ಯಾತ್ರಾರ್ಥಿಗಳಿಗೆ ತುಪ್ಪಾಭಿಷೇಕ ನಡೆಯಲಿದೆ. 19ರಂದು ಮಣಿ ಮಂಟಪದಿಂದ ಸರಂಕುತ್ತಿವರೆಗೆ ದರ್ಶನಬಲಿ ನಡೆಯಲಿದೆ. 20ರಂದು ರಾತ್ರಿ 10 ಗಂಟೆಗೆ ಮಾಳಿಗಪ್ಪುರಂ  ದೇವಸ್ಥಾನದಲ್ಲಿ ಕುರುತಿ ಉತ್ಸವ ನಡೆಯಲಿದೆ. 21ರಂದು ಬೆಳಗ್ಗೆ ತಿರುವಾಭರಣದ ಕಳಶವನ್ನು ಎತ್ತಲಾಗುವುದು. ನಂತರ ಪಂದಳಂ ರಾಜನ ಪ್ರತಿನಿಧಿಯು ಶಬರೀಶನ ದರ್ಶನ ಮಾಡಿ ಹರಿವರಾಸನವನ್ನು ಹಾಡಿ ಶ್ರೀಮಠವನ್ನು ಪ್ರವೇಶಿಸುವರು. ಮಕರ ಬೆಳಕು ದರ್ಶನಕ್ಕಾಗಿ ಶಬರೀಶ ಸನ್ನಿಧಿಗೆ ಯಾತ್ರಾರ್ಥಿಗಳು ಹರಿದು ಬರುತ್ತಿದ್ದಾರೆ.

                    ಯಾತ್ರಾರ್ಥಿಗಳಿಗೆ ಸನ್ನಿಧಿಯಲ್ಲಿ ನಿರ್ಬಂಧ ಹೇರಲಾಗಿದ್ದರೂ, ಭಕ್ತರು ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ಇದಲ್ಲದೇ ಮಕರಜ್ಯೋತಿ ವೀಕ್ಷಿಸಲು ಎಲ್ಲಾ ಪ್ರದೇಶಗಳಲ್ಲಿ ಯಾತ್ರಾರ್ಥಿಗಳು ಬಿಡಾರ ಹೂಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries