ಬದಿಯಡ್ಕ: ಮನೆಯಲ್ಲಿ ಕಷ್ಟಪಟ್ಟು ದುಡಿದು, ಎಷ್ಟೇ ಕಷ್ಟಗಳಿದ್ದರೂ ಅದನ್ನು ಮರೆತು ಊರಿನ ದೇವಾಲಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಭಗವದ್ಭಕ್ತರ ತ್ಯಾಗದ ಫಲವಾಗಿ ಸನಾತನ ಧರ್ಮವು ವೈವಿಧ್ಯದಿಂದ ಮೆರೆಯುತ್ತದೆ. ಕಾರ್ಮಾರು ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಹಮ್ಮಿಕೊಂಡ ನಿಕೂಪನ್ ಶ್ರೀನಿದಿ ಅಕ್ಷಯ ನಿದಿಯಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ವಾರ್ಷಿಕೋತ್ಸವ ಹಾಗೂ ಕೆಲಸ ಕಾರ್ಯಗಳಿಗೆ ಆರ್ಥಿಕತೆಯನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಶ್ರೀಕ್ಷೇತ್ರದಲ್ಲಿ ಜರಗಿದ ಸಮಾರಂಭದಲ್ಲಿ ಶ್ರೀನಿಧಿ ನಾಮಾಂಕಿತ ಕೂಪನ್ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಕ್ಷೇತ್ರ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀದೇವರಿಗೆ ನವಕಾಭಿಷೇಕ ನೆರವೇರಿಸಿ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಗೌರವ ಸಲಹೆಗಾರರಾದ ಉದ್ಯಮಿ ಬಿ ವಸಂತ ಪೈ ಅಧ್ಯಕ್ಷತೆ ವಹಿಸಿ ಮೊದಲ ಕೂಪನ್ ಪಡೆದುಕೊಂಡು ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿಯ ರಕ್ಷಣಾಧಿಕಾರಿ ಉದ್ಯಮಿ ಮಧುಸೂದನ ಆಯರ್ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುಖೇಶ್, ಸಾಹಿತಿ ರಾಜಶ್ರೀ ಟಿ ರೈ ಪೆರ್ಲ, ಉಳ್ಳೋಡಿ ಸ್ವಾಮಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಗಣೇಶ್ ಉಳ್ಳೋಡಿ, ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಸೇವಾಸಮಿತಿ ಕಾರ್ಯಾಧ್ಯಕ್ಷ ಶ್ಯಾಮ ಭಟ್ ಏವುಂಜೆ, ಉದ್ಯಮಿ ಸಂತೋಷ್ ಕುಮಾರ್ ಎಸ್ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಕಾರ್ಯಾಧ್ಯಕ್ಷ ರಾಮ ಕೆ.ಕಾರ್ಮಾರು ವಂದಿಸಿದರು. ಆಡಳಿತ ಮೊಕ್ತೇಸರ ಕಾರ್ಮಾರು ನರಸಿಂಹ ಭಟ್ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಕೃಷ್ಣಮೂರ್ತಿ ಪುದುಕೋಳಿ, ಶ್ರೀಕೃಷ್ಣ ಭಟ್ ಪುದುಕೋಳಿ, ಶ್ಯಾಮಪ್ರಸಾದ ಮಾನ್ಯ, ವಿಜಯ ಮಾನ್ಯ, ಪುನೀತ್, ಜ್ಯೋತಿ ಕಾರ್ಮಾರು, ರಂಜಿತ್ ಯಾದವ್, ನವೀನ್ ಕುಮಾರ್, ಅರ್ಚಕ ಸೂರ್ಯನಾರಾಯಣ ಭಟ್ ಸಹಕರಿಸಿದರು.