ಕಾಸರಗೊಡು: ನಗರದ ಅಡ್ಕತ್ತಬೈಲ್ ಹೊಸಮನೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ 2024 ಮಾರ್ಚ್ 22 ರಿಂದ 25 ರವರೆಗೆ ಶ್ರೀ ಧೂಮಾವತಿ ದೇವರ ಧರ್ಮ ನೇಮೋತ್ಸವ, ಪ್ರತಿಷ್ಠಾ ವಾರ್ಷಿಕೋತ್ಸವ, ಬ್ರಹ್ಮಬಲಿ ಬೈದರ್ಕಳ ನೇಮೋತ್ಸವದ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಬೈದರ್ಕಳ ಗರಡಿ ವಠಾರದಲ್ಲಿ ಜರುಗಿತು.
ಕಾಸರಗೋಡಿನ ಕ್ಯಾತ ವೈದ್ಯ, ಡ. ಅನಂತ ಕಾಮತ್ ಅವರು ಧಾರ್ಮಿಕ-ಸಾಂಸ್ಕøತಿಕ ಕಾರ್ಯಕರ್ತೆ ಮೀರಾ ಕಾಮತ್ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಕಮಲಾಕ್ಷ ಕೆ.ಎನ್, ಕಾರ್ಯದರ್ಶಿ ಮೈಂದಪ್ಪ, ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕಮಲಾಕ್ಷ ಸುವರ್ಣ, ಕಾರ್ಯದರ್ಶಿ ಶಿವ ಕರಂದಕ್ಕಾಡ್, ದಯಾನಂದ ಪೂಜಾರಿ ಕೊಳಕೆಬೈಲ್, ರಘು ಮಿಪುಗಿರಿ, ಪ್ರೇಮಜಿತ್, ಸತ್ಯನಾರಾಯಣ ಮಾಸ್ಟರ್, ರಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.